ದ.ಕ ಜಿಲ್ಲಾ ಗೃಹರಕ್ಷಕರ ಜಿಲ್ಲಾ ಮಟ್ಟದ ಕ್ರೀಡಾಕೂಟ ಉಧ್ಘಾಟನಾ ಸಮಾರಂಭ

 (ನ್ಯೂಸ್ ಕಡಬ) newskadaba.com, ಮಂಗಳೂರು, ನ.27.   ಜಿಲ್ಲಾ ಗೃಹರಕ್ಷಕ ದಳ ದ.ಕ, ಜಿಲ್ಲೆ ಮಂಗಳೂರು ಇವರ ಜಿಲ್ಲಾ ಮಟ್ಟದ ವೃತ್ತಿಪರ ಕ್ರೀಡಾಕೂಟದ 2019 ರ ಉದ್ಘಾಟನಾ ಸಮಾರಂಭ ನವೆಂಬರ್ 26 ರಂದು ಜಿಲ್ಲಾ ಗೃಹರಕ್ಷಕ ದಳದ ಕಛೇರಿ ಆವರಣದ ಮೇರಿಹಿಲ್ ಇಲ್ಲಿ ನಡೆಯಿತು.


ಜಿಲ್ಲಾ ಗೃಹರಕ್ಷಕ ದಳದ ಸಮಾದೇಷ್ಠ ಡಾ.ಮುರಲೀ ಮೋಹನ್ ಚೂಂತಾರು ಇವರ ಅಧ್ಯಕ್ಷತೆಯಲ್ಲಿ ಉಧ್ಥಾಟನಾ ಸಮಾರಂಭ ಜರುಗಿತು. ಆಟದಲ್ಲಿ ಸೋಲು ಗೆಲುವನ್ನು ಸಮಾನವಾಗಿ ಸ್ವೀಕರಿಸಬೇಕು, ಸೋಲೇ ಗೆಲುವಿನ ಸೋಪಾನ ಆಟೋಟಗಳಿಂದ ನಾವೆಲ್ಲ ಬದುಕಿನ ಪಾಠ ಕಲಿಯಬೇಕು ಎಂದು ಕರೆ ನೀಡಿದರು. ಕಾರ್ಯಕ್ರಮದಲ್ಲಿ ಕಚೇರಿಯ ಅಧೀಕ್ಷಕ ರತ್ನಾಕರ್ ಹಾಗೂ ಕಚೇರಿ ಸಿಬ್ಬಂದಿಗಳು, ಗೃಹರಕ್ಷಕ ಹಾಗೂ ಗೃಹರಕ್ಷಕಿಯರು ಉಪಸ್ಥಿತರಿದ್ದರು.

Also Read  ಕಾಣಿಯೂರು ಪ್ರಗತಿ ವಿದ್ಯಾಸಂಸ್ಥೆಯಲ್ಲಿ ಆಟಿದ ಕೂಟೊ ಲೇಸ್ - ಸನ್ಮಾನ

error: Content is protected !!
Scroll to Top