ಡಿ.10 ರಂದು ಅಂಚೆ ಪಿಂಚಣಿ ಅದಾಲತ್

(ನ್ಯೂಸ್ ಕಡಬ) newskadaba.com, ಮಂಗಳೂರು, ನ.26. ಮಂಗಳೂರು ಅಂಚೆ ವಿಭಾಗದ ಹಿರಿಯ ಅಂಚೆ ಅಧೀಕ್ಷಕರ ಕಚೇರಿ, ಬಲ್ಮಠದಲ್ಲಿ ಪಿಂಚಣಿ ಅದಾಲತ್ ಕಾರ್ಯಕ್ರಮವು ಡಿಸೆಂಬರ್ 10 ರಂದು ಬೆಳಿಗ್ಗೆ 11 ಗಂಟೆಗೆ ನಡೆಯಲಿದೆ.

ಮಂಗಳೂರು ಅಂಚೆ ವಿಭಾಗದಲ್ಲಿ ಪಿಂಚಣಿ ತೆಗೆದುಕೊಳ್ಳುವ  ನಿವೃತ್ತ ಅಂಚೆ ನೌಕರರು ಸಂಬಂಧಪಟ್ಟ ದೂರುಗಳೇನಾದರೂ ಇದ್ದಲ್ಲಿ ಪಿಂಚಣಿ ಅದಾಲತ್ ತಲೆ ಬರಹದಡಿಯಲ್ಲಿ ಡಿಸೆಂಬರ್ 3 ರೊಳಗೆ ಹಿರಿಯ ಅಂಚೆ ಅಧೀಕ್ಷಕರು, ಮಂಗಳೂರು ವಿಭಾಗ ಬಲ್ಮಠ -575002 ವಿಳಾಸಕ್ಕೆ ಕಳುಹಿಸಬೇಕು ಎಂದು ಹಿರಿಯ ಅಂಚೆ ಅಧೀಕ್ಷಕರು ಮಂಗಳೂರು ವಿಭಾಗ ಇವರ ಪ್ರಕಟಣೆ ತಿಳಿಸಿದೆ.

Also Read  ಎಸ್ಸೆಸ್ಸೆಫ್ ತೆಕ್ಕಾರು ಯುನಿಟ್ ಮಫಾಝ ಕ್ಯಾಂಪ್

error: Content is protected !!
Scroll to Top