ಗೃಹರಕ್ಷಕರ ಜಿಲ್ಲಾ ಮಟ್ಟದ ವಾರ್ಷಿಕ ಕ್ರೀಡಾಕೂಟ

 (ನ್ಯೂಸ್ ಕಡಬ) newskadaba.com ಮಂಗಳೂರು ನ.26.   ಜಿಲ್ಲಾ ಗೃಹರಕ್ಷಕ ದಳ, ದಕ್ಷಿಣ ಕನ್ನಡ ಜಿಲ್ಲೆ, ಮಂಗಳೂರು ಇವರ ವತಿಯಿಂದ 2019-20ನೇ ಸಾಲಿನ ಗೃಹರಕ್ಷಕರ ವಾರ್ಷಿಕ ಕ್ರೀಡಾಕೂಟವು ಮೇರಿಹಿಲ್‍ನ ಜಿಲ್ಲಾ ಕಚೇರಿಯಲ್ಲಿ  ಇಂದು ಮತ್ತು ನಾಳೆ  ನಡೆಯಲಿದೆ.


ಕ್ರೀಡಾಕೂಟದ ಸಮಾರೋಪ ಸಮಾರಂಭವು ನವೆಂಬರ್ 27 ರಂದು ಬೆಳಿಗ್ಗೆ 11 ಗಂಟೆಗೆ ಜಿಲ್ಲಾ ಕಚೇರಿಯಲ್ಲಿ ನಡೆಯಲಿದೆ. ಸಭೆಯ ಅಧ್ಯಕ್ಷತೆಯನ್ನು ಜಿಲ್ಲಾ ಸಮಾದೇಷ್ಟರಾದ ಡಾ: ಮುರಲೀ ಮೋಹನ ಚೂಂತಾರು ವಹಿಸಲಿದ್ದಾರೆ ಎಂದು ಜಿಲ್ಲಾ ಗೃಹರಕ್ಷಕ ದಳದ ಪ್ರಕಟಣೆಯಲ್ಲಿ ತಿಳಿಸಿದೆ.

Also Read  ಕಡಬ: ನಾಪತ್ತೆಯಾಗಿದ್ದ ಅವಿವಾಹಿತನ ಮೃತ ದೇಹ ಹೊಸ್ಮಠ ಹೊಳೆಯಲ್ಲಿ ಪತ್ತೆ

error: Content is protected !!
Scroll to Top