ಬಿಸಿಯೂಟಕ್ಕೆ ಶಾಲೆಯಲ್ಲಿಯೇ ಬೆಳೆದರು ತರಕಾರಿ ➤ನೂಜಿಬಾಳ್ತಿಲ ಶಾಲೆಯಲ್ಲಿದೆ ವಿವಿಧ ಬಗೆಯ ತರಕಾರಿ ಕೈ ತೋಟ

(ನ್ಯೂಸ್ ಕಡಬ) newskadaba.com ಕಲ್ಲುಗುಡ್ಡೆ, .26  ಸರಕಾರಿ ಪ್ರಾಥಮಿಕ ಶಾಲಾ ಆವರಣದಲ್ಲಿಯೇ ಸಮೃದ್ಧ ತರಕಾರಿ ಕೃಷಿಯ ಕೈ ತೋಟ ನಿರ್ಮಿಸಿ, ಮದ್ಯಾಹ್ನದ ಬಿಸಿಯೂಟಕ್ಕೆ ಅನುಕೂಲವಾಗುವಂತೆ ವಿವಿಧ ಬಗೆಯ ತರಕಾರಿಗಳನ್ನು ಬೆಳೆದು ಮಾದರಿಯಾಗಿದ್ದಾರೆ ಈ ಶಾಲೆಯವರು.

ಕಡಬ ತಾಲೂಕಿನ ನೂಜಿಬಾಳ್ತಿಲ ಗ್ರಾಮದ ಕಲ್ಲುಗುಡ್ಡೆ ಉನ್ನತ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಈ ವಿಶೇಷ ತರಕಾರಿ ಕೈ ತೋಟವನ್ನು ಮಾಡಿದ್ದು, ಇದೀಗ ತರಕಾರಿ ಯಥೇಚ್ಚವಾಗಿ ಬೆಳೆದು ಫಸಲು ಬಂದಿದ್ದು, ಶ್ರಮಪಟ್ಟ ತಂಡ ಇದೀಗ ಸಂತೋಷದ ನಗೆ ಬೀರಿದ್ದಾರೆ. ಈ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿರುವ ಸುಮಾರು 150ಕ್ಕೂ ಅಧಿಕ ವಿದ್ಯಾರ್ಥಿಗಳು ಇದರ ಸದುಪಯೋಗ ಪಡೆದುಕೊಳ್ಳುತ್ತಿದ್ದಾರೆ. ಶಾಲಾ ಆವರಣದ ಖಾಲಿ ಜಾಗದಲ್ಲಿ ತರಕಾರಿ ಬೆಳೆದಿದ್ದು, ರಕ್ಷಣೆಯ ದೃಷ್ಟಿಯಿಂದ ಕೈ ತೋಟಕ್ಕೆ ಸುತ್ತ ತಡೆಬೇಲಿ ನಿರ್ಮಿಸಲಾಗಿದೆ. ಇಲ್ಲಿ ನಿರ್ಮಿಸಲಾದ ತರಕಾರಿ ತೋಟದಲ್ಲಿ ವಿವಿಧ ಬಗೆಯ ತರಕಾರಿಗಳನ್ನು ಬೆಳೆಯಲಾಗಿದೆ. ಅಲಸಂಡೆ, ಬಸಾಲೆ, ಬೆಂಡೆಕಾಯಿ, ಬದನೆ, ತೊಂಡೆಕಾಯಿ ಮುಂತಾದ ತರಕಾರಿಗಳನ್ನು ಬೆಳೆಸಲಾಗಿದೆ. ಸ್ಥಳೀಯವಾಗಿ ತರಕಾರಿ ಬೀಜಗಳನ್ನು ಪಡೆದು ಶಾಲಾ ಆವರಣದಲ್ಲಿಯೇ ಕೈ ತೋಟ ರಚಿಸಿ ತರಕಾರಿ ಬೆಳೆಸಲಾಗಿದೆ.

Also Read  3 ಕೆಜಿ ಬೆಳ್ಳಿ ಕದ್ದ ನೇಪಾಳಿಗರು ► ಉಡುಪಿ ಪೊಲೀಸರ ಬಲೆಗೆ..!!!

ಸರಕಾರಿ ಶಾಲೆಯಲ್ಲಿ ಈ ವಿನೂತನ ತರಕಾರಿ ತೋಟ ನಿರ್ಮಿಸಿರುವುದರ ಹಿಂದೆ ಶಾಲಾ ಎಸ್.ಡಿ.ಎಂ.ಸಿ. ಸಮಿತಿಯವರ ಪ್ರಯತ್ನವಿದೆ. ಎಸ್.ಡಿ.ಎಂ.ಸಿ. ಅಧ್ಯಕ್ಷ ಲಕ್ಷ್ಮಣ ಗೌಡ ಅವರ ನೇತೃತ್ವದಲ್ಲಿ ತರಕಾರಿ ತೋಟ ರಚಿಸಲಾಗಿದೆ. ಶಾಲಾ ಶಿಕ್ಷಕರ, ಪೋಷಕರ ಸಹಕಾರದೊಂದಿಗೆ, ನೂಜಿಬಾಳ್ತಿಲ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಒಕ್ಕೂಟ ಸದಸ್ಯರ ಶ್ರಮದಾನವನ್ನು ಪಡೆಯಲಾಗಿದೆ. ಇದೀಗ ತರಕಾರಿ ತೋಟಕ್ಕೆ ಸ್ವತಃ ಎಸ್.ಡಿ.ಎಂ.ಸಿ. ಅಧ್ಯಕ್ಷರೇ ನೀರಾಯಿಸಲು ಮುತುವರ್ಜಿ ವಹಿಸಿದ್ದಾರೆ. ಜೊತೆಗೆ ಶಾಲಾ ವಿದ್ಯಾರ್ಥಿಗಳು, ಶಿಕ್ಷಕರು, ಸಮಿತಿಯವರು ಕೈಜೋಡಿಸುತ್ತಿದ್ದಾರೆ.

ಶಾಲಾ ಆವರಣದಲ್ಲಿ ವಿವಿಧ ಬಗೆಯ ತರಕಾರಿ ಬೆಳೆದು ಇದೀಗ ಫಸಲು ಬಂದಿದ್ದು, ತರಕಾರಿಗಳನ್ನು ಶಾಲೆಯ ಮದ್ಯಾಹ್ನದ ಬಿಸಿಯೂಟಕ್ಕೆ ಬಳಸಲಾಗುತ್ತಿದೆ. ಜೊತೆಗೆ ಇಲ್ಲಿ ತರಕಾರಿಗಳು ಹೆಚ್ಚುವರಿಯಾದಲ್ಲಿ ಅದನ್ನು ಅಂಗಡಿಗಳಿಗೆ ಕೊಟ್ಟು ಬದಲಿ ಇತರೆ ತರಕಾರಿಗಳನ್ನು ಪಡೆಯಲಾಗುತ್ತದೆ ಎನ್ನುತ್ತಾರೆ ಶಿಕ್ಷಕರು. ಕೃಷಿಯಲ್ಲಿ ಆಸಕ್ತಿ ಕಳೆದುಕೊಳ್ಳುತ್ತಿರುವ ಈ ಕಾಲದಲ್ಲಿ ಶಾಲೆಯಲ್ಲಿಯೇ ತರಕಾರಿ ತೋಟ ನಿರ್ಮಿಸಿ, ಶಾಲಾ ಬಳಕೆಗೆ ಅನುಕೂಲವಾಗುವಂತೆ ವ್ಯವಸ್ಥೆ ಮಾಡಲಾಗಿದ್ದು, ಕೃಷಿ ಬೆಳೆಗಳ ಬಗ್ಗೆ ಕೆಲಸ ನಿರ್ವಹಿಸುವ ವಿಧಾನಗಳು ಸೇರಿದಂತೆ, ಇಂತಹ ಪ್ರಯತ್ನಗಳಿಂದ ವಿದ್ಯಾರ್ಥಿಗಳಲ್ಲಿಯೂ ಕೃಷಿಯ ಬಗ್ಗೆ ಆಸಕ್ತಿ ಬೆಳೆಯಲು ಇದು ಸಾಧ್ಯವಾಗಲಿದ್ದು, ಮಾದರಿ ನಡೆ ಇದಾಗಿದೆ. ನಮ್ಮ ಶಾಲೆಯಲ್ಲಿ ಸುಂದರವಾದ ತರಕಾರಿ ತೋಟ ನಿರ್ಮಿಸಿದ್ದು, ಇದೀಗ ಫಸಲು ಬಂದು ಬಿಸಿಯೂಟಕ್ಕೆ ಬಳಸಲಾಗುತ್ತಿದೆ. ಎಸ್.ಡಿ.ಎಂ.ಸಿ. ಅಧ್ಯಕ್ಷ ಲಕ್ಷ್ಮಣ ಗೌಡ ಅವರ ಪ್ರಯತ್ನದಿಂದ ಇದು ಸಾಧ್ಯವಾಗಿದೆ. ಇದರಿಂದಾಗಿ ವಿದ್ಯಾರ್ಥಿಗಳಿಗೂ ಪ್ರತಿದಿನ ಬಗೆ ಬಗೆಯ ತರಕಾರಿಯಿಂದ ತಯಾರಿಸಿದ ಪದಾರ್ಥ ಸೇವಿಸಬಹುದಾಗಿದೆ.

Also Read  ಪುತ್ತೂರು ಮತ್ತು ಕಡಬ ತಾಲೂಕಿನಲ್ಲಿ ಇಂದು 15 ಮಂದಿಯಲ್ಲಿ ಕೊರೋನಾ ಸೋಂಕು ಪತ್ತೆ

error: Content is protected !!
Scroll to Top