ನ. 29 ರಂದು ವಿಕಲಚೇತನರಿಗೆ ಕ್ರೀಡಾಕೂಟ

 (ನ್ಯೂಸ್ ಕಡಬ) newskadaba.com ಮಂಗಳೂರು, .26.  ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿ ಮಂಗಳೂರು ಉತ್ತರ ವಲಯ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ವಿಕಲಚೇತನರ ಹಾಗೂ ಹಿರಿಯ ನಾಗರೀಕರ ಸಬಲೀಕರಣ ಇಲಾಖೆ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ದ.ಕ ಜಿಲ್ಲಾ ವಿಕಲಚೇತನರ ಪುನರ್ವಸತಿ ಕೇಂದ್ರ (ಡಿ.ಡಿ.ಆರ್.ಸಿ), ಲಯನ್ಸ್ ಲಿಂಬ್ ಸೆಂಟರ್, ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲಾ ವಿಕಲಚೇತನರ ಸಂಘ, ರೋಟರ್ಯಾಕ್ಟ್ ಕ್ಲಬ್ ಮಂಗಳೂರು ಸಿಟಿ, ಗ್ರಾಮೀಣ & ತಾಲ್ಲೂಕು ಪುನರ್ವಸತಿ ಕಾರ್ಯಕರ್ತರು ಮಂಗಳೂರು ಇವರ ಸಹಯೋಗದೊಂದಿಗೆ ನವೆಂಬರ್ 29 ರಂದು ಬೆಳಿಗ್ಗೆ 9 ರಿಂದ ದ.ಕ.ಜಿ.ಪಂ. ಹಿರಿಯ ಪ್ರಾಥಮಿಕ ಶಾಲೆ ಮೈದಾನ ಗಾಂಧಿನಗರ ಲೇಡಿಹಿಲ್ ಮಂಗಳೂರು ಇಲ್ಲಿ ಮಂಗಳೂರು ತಾಲ್ಲೂಕು ಮಟ್ಟದ ವಿಕಲಚೇತನರಿಗೆ ವಿಶ್ವ ವಿಕಲಚೇತನರ ದಿನಾಚರಣೆ 2019-20ರ ಪ್ರಯುಕ್ತ ಕ್ರೀಡಾಕೂಟವನ್ನು ಏರ್ಪಡಿಸಲಾಗಿದೆ. ತಾಲ್ಲೂಕಿನ ಎಲ್ಲಾ ಬಗೆಯ ವಿಕಲಚೇತನರು ಭಾಗವಹಿಸಬಹುದಾಗಿದೆ.

Also Read  ಮಂಗಳೂರು ಮಹಾನಗರಪಾಲಿಕೆ ➤ ಆ.29- ನೀರು ಪೂರೈಕೆ ಸ್ಥಗಿತ

 

ಹೆಚ್ಚಿನ ಮಾಹಿತಿಗಾಗಿ 9964052949, 7026336559, 0824-2422300 ಸಂಪರ್ಕಿಸಬಹುದು ಎಂದು ನೋಡಲ್ ಅಧಿಕಾರಿ ಜಿಲ್ಲಾ ವಿಕಲಚೇತನರ ಪುನರ್ವಸತಿ ಕೇಂದ್ರ, ದಕ್ಷಿಣ ಕನ್ನಡ ಜಿಲ್ಲೆ ಇವರ ಪ್ರಕಟಣೆ ತಿಳಿಸಿದೆ.

error: Content is protected !!
Scroll to Top