(ನ್ಯೂಸ್ ಕಡಬ) newskadaba.com ಕಡಬ, ಆ .21, ಸೌರಮಂಡಲದಲ್ಲಿ ಇಂದು ಶತಮಾನದ ಸೂರ್ಯ ಗ್ರಹಣ ಸಂಭವಿಸಲಿದೆ. ಚಂದ್ರಗ್ರಹಣ ಗತಿಸಿದ 2 ವಾರಗಳ ಅಂತರದಲ್ಲಿ ಸೂರ್ಯಗ್ರಹಣ ಸಂಭವಿಸ್ತಿರೋದು ವಿಜ್ಞಾನಿಗಳಿಗೆ ಹಬ್ಬವಾಗಿದೆ.
ಅಮಾವಾಸ್ಯೆಗಳಂದು ಕಾಣುವ ಸೂರ್ಯಗ್ರಹಣವು ಈ ಹಿಂದೆ 1918ರಲ್ಲಿ ಖಗ್ರಾಸ್ ಆಗಿ ಇಡೀ ಅಮೆರಿಕದಾದ್ಯಂತ ಗೋಚರಿಸಿತ್ತು. ಇದಾದ ಬಳಿಕ ಇದೇ ಮೊದಲ ಬಾರಿ ಇಡೀ ಅಮೆರಿಕದಲ್ಲಿ ಸೂರ್ಯನು ಹಗಲಲ್ಲೇ ಮರೆಯಾಗಲಿದ್ದಾನೆ.
ಅಮೆರಿಕ, ಯುರೋಪ್ ಮತ್ತು ಆಫ್ರಿಕಾ ದೇಶಗಳಲ್ಲಿ ಈ ಅತಿದೊಡ್ಡ ಕೌತುಕ ಕಾಣಸಿಗಲಿದೆ. ನ್ಯೂಯಾರ್ಕ್ ಕಾಲಮಾನ ಪ್ರಕಾರ ಮಧ್ಯಾಹ್ನ 12.05ಕ್ಕೆ ಆರಂಭವಾಗುವ ಸೂರ್ಯಗ್ರಹಣ ಸಂಜೆ 4.09ರ ಹೊತ್ತಿಗೆ ಮುಗಿಯಲಿದೆ. ಭಾರತೀಯ ಕಾಲಮಾನದ ಪ್ರಕಾರ ನಮ್ಮ ದೇಶದಲ್ಲಿ ರಾತ್ರಿ ಆಗಿರುತ್ತದೆ. ಹೀಗಾಗಿ ಇದರ ಎಫೆಕ್ಟ್ ಭಾರತದಲ್ಲಿ ಇರುವುದಿಲ್ಲ.
ಪೂರ್ಣ ಗ್ರಹಣದ ವೇಳೆ ಗ್ರಹಣ ಕಾಣಿಸುವ ದೇಶದ ಬಹುತೇಕ ಭಾಗಗಳಲ್ಲಿ ಕತ್ತಲು ಆವರಿಸಲಿದೆ. ಸೂರ್ಯ ಮತ್ತು ಭೂಮಿಯ ನಡುವೆ ಚಂದ್ರ ಹಾದು ಹೋಗುವ ಮೂಲಕ ಭೂಮಿಯ ಮೇಲೆ ಚಂದ್ರನ ನೆರಳು ಆವರಿಸುವ ಈ ವಿದ್ಯಮಾನವು ಸುಮಾರು ಮೂರು ಗಂಟೆಗಳ ಕಾಲ ನಡೆಯಲಿದೆ. 2 ನಿಮಿಷ 40 ಸೆಕೆಂಡ್‍ಗಳ ಕಾಲ ಸೂರ್ಯನನ್ನು ಚಂದ್ರ, ಭೂಮಿ ಸಂಪೂರ್ಣವಾಗಿ ಮರೆ ಮಾಡಲಿದೆ. ಆಫ್ರಿಕಾ ಮತ್ತು ಯೂರೋಪ್‍ನಿಂದಲೂ ಪಾಶ್ರ್ವ ಗ್ರಹಣ ದರ್ಶನವಾಗಲಿದೆ ಎಂದು ಖಗೋಳ ತಜ್ಞರು ಹೇಳಿದ್ದಾರೆ.
ಈ ಖಗ್ರಾಸ ಸೂರ್ಯಗ್ರಹಣವನ್ನು ಬರೀಗಣ್ಣಿನಿಂದ ನೋಡಬಾರದು. ಯಾಕೆಂದರೆ ಇದರಿಂದ ಕಣ್ಣಿನ ಅಕ್ಷಿಪಟಲ ಸುಟ್ಟು ಹೋಗಬಹುದು ಅಥವಾ ಕಣ್ಣಿನಲ್ಲಿ ಶಾಶ್ವತ ಅಂಧತ್ವ ಉಂಟಾಗಬಹುದು ಎಂದು ಪರಿಣತ ತಜ್ಞರು ಎಚ್ಚರಿಕೆ ನೀಡಿದ್ದಾರೆ.