(ನ್ಯೂಸ್ ಕಡಬ) newskadaba.com ಪುತ್ತೂರು , ನ.22 ಪುತ್ತೂರು ಮಹಿಳಾ ಪೊಲೀಸ್ ಠಾಣೆಯ ಮಹಿಳಾ ಪೊಲೀಸ್ ಉಪನಿರೀಕ್ಷಕರಾದ ಸೇಸಮ್ಮ ರವರು ರಾತ್ರಿ ಕರ್ತವ್ಯ ನಿರ್ವಹಿಸುತ್ತಿದ್ದಾಗ ಪುತ್ತೂರು ಬಸ್ ನಿಲ್ದಾಣದ ಬಳಿ ಮಾನಸಿಕವಾಗಿ ಅಸ್ವಸ್ಥ ವ್ಯಕ್ತಿಯೋರ್ವ ತಿರುಗಾಡುತ್ತಿರುವುದು ಕಂಡುಬಂದು ಆತನನ್ನು ವಿಚಾರಿಸಿ, ಮನೆಗೆ ತಲುಪಿಸಿದ ಘಟನೆ ಗುರುವಾರದಂದು ನಡೆದಿದೆ.
ಮಾನಸಿಕ ಅಸ್ವಸ್ಥ ವ್ಯಕ್ತಿಯು ದಿನಾಂಕ 19.11.2019 ರಂದು ಮನೆಯವರಿಗೆ ಯಾವುದೇ ಮಾಹಿತಿ ನೀಡದೇ ಹೊರಹೋಗಿರುವುದಾಗಿಯೂ ಆತನಿಗಾಗಿ ಹುಡುಕಾಟ ನಡೆಸಿ ಪತ್ತೆಯಾಗದೇ ಆತನ ವಯೋವೃದ್ದ ತಂದೆ-ತಾಯಿ ಚಿಂತಿತರಾಗಿರುವುದು ತಿಳಿದುಬಂದಿದ್ದು, ಆ ಕೂಡಲೇ ತಮ್ಮ ವಾಹನದಲ್ಲಿ ಆತನನ್ನು ಕರೆದುಕೊಂಡು ಹೋಗಿ ಆತನ ಮನೆಗೆ ತಲುಪಿಸಿರುತ್ತಾರೆ. ಈ ಮೂಲಕ ತಮ್ಮ ಇಲಾಖಾ ಕರ್ತವ್ಯದೊಂದಿಗೆ ಸಾಮಾಜಿಕ ಕಾಳಜಿಯನ್ನು ತೋರಿದ ಮಹಿಳಾ ಪೊಲೀಸ್ ಉಪನಿರೀಕ್ಷಕರಾದ ಸೇಸಮ್ಮ ರವರು ಎಲ್ಲರ ಪ್ರಶಂಸೆಗೆ ಪಾತ್ರರಾಗಿರುತ್ತಾರೆ.
Also Read ಪುತ್ತೂರು: ಪ್ರಕೃತಿ ವೈಚಿತ್ರ್ಯಕ್ಕೆ ಸಾಕ್ಷಿಯಾದ ಬಾಳೆಗಿಡ ► ಗಿಡದ ಮಧ್ಯ ಭಾಗದಿಂದ ಹೊರಬಂದ ಬಾಳೆಗೊನೆ..!!!