ಧರ್ಮಸ್ಥಳ ಲಕ್ಷದೀಪೋತ್ಸವ ಸಂಭ್ರಮ ಇಂದಿನಿಂದ ಆರಂಭ

 (ನ್ಯೂಸ್ ಕಡಬ) newskadaba.com ಬೆಳ್ತಂಗಡಿ, ನ.22  ನಾಡಿನ ಪವಿತ್ರ ಕ್ಷೇತ್ರ ಶ್ರೀಕ್ಷೇತ್ರ ಧರ್ಮಸ್ಥಳವು ಕಾರ್ತಿಕ ಮಾಸದಲ್ಲಿ ನಡೆಯುವ ಲಕ್ಷದೀಪೋತ್ಸವ ಸಂಭ್ರಮಕ್ಕೆ ಸಜ್ಜುಗೊಂಡಿದೆ. ಶ್ರೀಕ್ಷೇತ್ರ ಧರ್ಮಸ್ಥಳ ಧರ್ಮಾಧಿಕಾರಿ ಡಾ| ಡಿ. ವೀರೇಂದ್ರ ಹೆಗ್ಗಡೆಯವರ ಮಾರ್ಗದರ್ಶನದಲ್ಲಿ ನ. 22ರಿಂದ 26ರ ವರೆಗೆ ನಡೆಯಲಿರುವ ದೀಪೋತ್ಸವದಲ್ಲಿ ಸಾವಿರಾರು ಭಕ್ತಾದಿಗಳು ಭಾಗವಹಿಸಲಿದ್ದಾರೆ.

ಈಗಾಗಲೇ ದೇವಸ್ಥಾನ, ಬೀಡು, ರಸ್ತೆಗಳು, ವಸತಿಗೃಹ ಸಹಿತ ರಸ್ತೆಗಳು, ಸುತ್ತಮುತ್ತಲಿನ ಕಟ್ಟಡಗಳು ವಿದ್ಯುದ್ದೀಪಗಳಿಂದ ಅಲಂಕಾರಗೊಂಡು, ಸಾಲು ಸಾಲು ವಿಭಿನ್ನ ಮಳಿಗೆಗಳಿಂದ ಜನಾಕರ್ಷಣೆ ಪಡೆದಿದೆ. ನೇತ್ರಾವತಿ ಸ್ನಾನಘಟ್ಟದಿಂದ ಮುಖ್ಯ ದ್ವಾರದವರೆಗೆ ವಿದ್ಯುದ್ದೀಪಗಳು, ರಸ್ತೆ ಕೆರೆಗಳಲ್ಲಿ ಆಲಂಕಾರಿಕ ವಸ್ತುಗಳನ್ನು ಜೋಡಿಸಲಾಗಿದೆ. ಮುಖ್ಯದ್ವಾರ ಸಹಿತ ದೇವಸ್ಥಾನದ ಸಮೀಪದವರೆಗೂ ಸಾಲು ಸಾಲು ವಿವಿಧ ಬಗೆಯ ತಿಂಡಿ-ತಿನಿಸು, ಬಟ್ಟೆಬರೆಗಳು, ಕಾಫಿ – ಟೀ ಸ್ಟಾಲ್ ಮಳಿಗೆಗಳು ಭಕ್ತರನ್ನು ಸೆಳೆಯುವಂತಿದೆ. ಧರ್ಮಸ್ಥಳ ಪ್ರೌಢಶಾಲೆ ಮುಂಭಾಗದ ಆವರಣದಲ್ಲಿ ರಾಷ್ಟ್ರಮಟ್ಟದ 42ನೇ ವಸ್ತುಪ್ರದರ್ಶನ ಮಳಿಗೆಗಳು ಸಜ್ಜು ಗೊಂಡಿವೆ. ಲಕ್ಷ ದೀಪೋತ್ಸವ ಪ್ರಯುಕ್ತ ಸಾವಿರಾರು ಸ್ವಚ್ಛತಾ ಸೇನಾನಿಗಳು ಕ್ಷೇತ್ರದ ಸ್ವತ್ಛತೆ ಕಾಪಾಡುವಲ್ಲಿ ಮಹತ್ತರ ಪಾತ್ರ ವಹಿಸಿದ್ದಾರೆ.

Also Read  ಕಡಬ - ಎಡಮಂಗಲ ರಸ್ತೆಯ ಪಾಲೋಳಿ ಮುಳುಗು ಸೇತುವೆಗೆ ಊರವರಿಂದಲೇ ಕಾಯಕಲ್ಪ ► ಕೇಸರಿ ಯುವಕ ಮಂಡಲದ ಶ್ರಮದಿಂದ ಪಾಲೋಳಿ ಸೇತುವೆ ಸಂಚಾರಕ್ಕೆ ಮುಕ್ತ ► ಕೇವಲ 5 ಕಿ.ಮೀ. ಅಂತರದಲ್ಲಿ ಎಡಮಂಗಲ - ಕಡಬ ಸಂಪರ್ಕ ಕೊಂಡಿ

error: Content is protected !!
Scroll to Top