ಸುಳ್ಯದಲ್ಲಿ ಗೃಹರಕ್ಷಕರಿಗೆ ಪದೋನ್ನತಿ ಮತ್ತು ಸನ್ಮಾನ ಕಾರ್ಯಕ್ರಮ

 

 (ನ್ಯೂಸ್ ಕಡಬ) newskadaba.com ಸುಳ್ಯ, ನ.22  ಯುವ ಜನ ಸಂಯುಕ್ತ ಮಂಡಳಿಯ ವಠಾರದಲ್ಲಿ ಸುಳ್ಯದ ಗೃಹರಕ್ಷಕ ದಳದಲ್ಲಿ ಸೇವೆ ಸಲ್ಲಿಸುತ್ತಿರುವ ಗೃಹರಕ್ಷಕರಿಗೆ ಬಡ್ತಿ ಮತ್ತು ಸನ್ಮಾನ ಕಾರ್ಯಕ್ರಮವು ಗುರುವಾರದಂದು ನಡೆಯಿತು.


ಗೃಹರಕ್ಷಕ ದಳದ ಜಿಲ್ಲಾ ಕಮಾಂಡೆಂಟ್ ಡಾ|| ಮುರಲೀ ಮೋಹನ್ ಚೂಂತಾರೂ ಅಧ್ಯಕ್ಷತೆ ವಹಿಸಿದ್ದರು. ಲಯನ್ಸ್ ಜಿಲ್ಲಾ ಮಾಜಿ ಗರ್ವನರ್ ಎಂ.ಬಿ ಸದಾಶಿವ, ದ.ಕ ಜಿಲ್ಲಾ ಜರ್ನಲಿಸ್ಟ್ ಯೂನಿಯನ್ ಅಧ್ಯಕ್ಷ ಹರೀಶ್ ಬಂಟ್ವಾಳ ಮುಖ್ಯ ಅತಿಥಿಗಳಾಗಿದ್ದರು. ತಾಲೂಕು ಪ್ಲಟೂನ್ ಕಮಾಂಡೆಂಟ್ ಜಯಂತ್ ಶೆಟ್ಟಿ ಸ್ವಾಗತಿಸಿದರು. ಕಾರ್ಯಕ್ರಮದಲ್ಲಿ ಸೆಕ್ಷನ್ ಲೀಡರ್ ಗಳಾಗಿ ಬಡ್ತಿ ಹೊಂದಿದ ಕಿರಣ್ ಕುಮಾರ್ ಕೆ ಆರ್, ವಿಶ್ವನಾಥ ಎನ್, ಅಶ್ವತ್ ಕೆ ರವರುಗಳಿಗೆ ಹಾಗೂ ಅಸಿಸ್ಟೆಂಟ್ ಸೆಕ್ಷನ್ ಲೀಡರ್ ಗಳಾಗಿ ಬಡ್ತಿ ಹೊಂದಿದ ಪಿಟಿ ಗಿರಿಧರ, ಲೋಕೇಶ್, ಟಿಬಿ ಗೋಪಾಲಕೃಷ್ಣ, ಪದ್ಮಯ್ಯ ಪ್ರಭಾಕರ ಪೈಯವರುಗಳಿಗೆ ಬಡ್ತಿ ಆದೇಶ ಪ್ರತಿಗಳನ್ನು ಡಾ|| ಮುರಲೀ ಮೋಹನ್ ಚೂಂತಾರು ವಿತರಿಸಿದರು. ಇತ್ತೀಚಿಗೆ ಕನ್ನಡ ರಾಜ್ಯೋತ್ಸವ ಸಮಾರಂಭದಲ್ಲಿ ತಾಲೂಕು ಆಡಳಿತದಿಂದ ಪುರಸ್ಕರಿಸಲ್ಪಟ್ಟ ಗೃಹರಕ್ಷಕಿ ಪುಪ್ಷಾವತಿ ಹಾಗೂ ಎಟಿಎಂನಲ್ಲಿ ದೊರೆತೆ ಹಣವನ್ನು ವಾರಿಸುದಾರರಿಗೆ ತಲುಪಿಸಿ ಪ್ರಾಮಾಣಿಕತೆ ಮೆರೆದ ಗೃಹರಕ್ಷಕಿ ಗೀತಾರವರುಗಳನ್ನು ಸನ್ಮಾನಿಸಿ ಗೌರವಿಸಲಾಯಿತು.

Also Read  ಉಪ್ಪಿನಂಗಡಿ: ಬಡ ಯುವಕನಿಗೆ ದಾನಿಗಳ ನೆರವು ಬೇಕಾಗಿದೆ

error: Content is protected !!
Scroll to Top