ಸಾಮಾಜಿಕ ಅವ್ಯವಸ್ಥೆಯ ವಿರುದ್ದ ಹೋರಾಟ, ಪರಿಸರ ಪ್ರೇಮಿ “ಜಂಗಲ್ ಜಾಕಿ” ಕಡಬದ ಗ್ರಾಮೀಣ ಯುವಕರಿಂದ ಕಿರು ಚಿತ್ರ ನಿರ್ಮಾಣ

 (ನ್ಯೂಸ್ ಕಡಬ) newskadaba.com  ಕಡಬ,  ನ.18  ಮೂಲಭೂತ ಸೌಕರ್ಯ ವಂಚಿತ ಊರಿನಲ್ಲಿ ಮೂಲಭೂತ ಸೌಕರ್ಯಕ್ಕಾಗಿ ಹೋರಾಟ,.. ಜನರ ಕಲ್ಯಾಣಕ್ಕಾಗಿ ಸರಕಾರ ಯೋಜನೆಗಳನ್ನು ಮಾಡಿದರೂ ಜನರ ದುರುಪಯೋಗದಿಂದ ಅದು ಸಮಾಜಕ್ಕೆ ಯಾವ ರೀತಿ ಮಾರಕವಾಗಿ ಪರಿಣಮಿಸುತ್ತದೆ. ಇದನ್ನು ವಿರೋಧಿಸಲು ಹೊರಟ ಆ ಊರಿನ ಬಡ ಪರಿಸರ ಪ್ರೇಮಿ ಯುವಕ, ಆದರೆ ಪ್ರಭಾವಿ ದಂಧೆಕೋರರ ವಿರುದ್ದ ಈತನ ಆಟ ನಡೆಯೊಲ್ಲ, ಆದರೂ ಶಕ್ತಿಯಿಂದ ಆಗದ ಕೆಲಸವನ್ನು ಯುಕ್ತಿಯಿಂದ ಮಾಡಲು ಹೊರಟು ಕೊನೆಗೆ ಓರ್ವ ದಕ್ಷ ನಿಷ್ಟಾವಂತ ಅಧಿಕಾರಿಯಿಂದ ಆ ಯುವಕನ ಉದ್ದೇಶ ಬಹಿರಂಗವಾಗುತ್ತದೆ ! ಇದು ಯಾವುದೇ ಪ್ರದೇಶದ ಘಟನೆ ಅಲ್ಲ, ಗ್ರಾಮೀಣ ಯುವಕನಲ್ಲಿ ಸಾಮಾಜಿಕ ಅವ್ಯವಸ್ಥೆ ಮತ್ತು ಪರಿಸರ ಪ್ರೇಮವೇ ಒಂದು ಕಥೆಯಾಗಿ ಮೂಡಿ ಬಂದಿದೆ, ಅದರ ಹೆಸರೇ “ಜಂಗಲ್ ಜಾಕಿ” ಕ್ಷಣಕ್ಷಣಕ್ಕೆ ಕುತೂಹಲ, ರೋಚಕ ತಿರುವು ಮುಂತಾದ ವಿಶಿಷ್ಠತೆಯುಳ್ಳ ಚಿತ್ರ ಜಂಗಲ್ ಜಾಕಿ ಈ ಜಂಗಲ್ ಜಾಕಿ ಯಾರು ಏನಿದರ ಮರ್ಮ ಎಂಬ ಹಲವು ಪ್ರಶ್ನೆಗೆ ಉತ್ತರ ಸಿಗಬೇಕಾದರೆ ಈ ಕಿರುಚಿತ್ರವನ್ನು ಒಮ್ಮೆ ನೀವು ನೋಡಲೇ ಬೇಕು.

Also Read  ಕುಂತೂರು ಮಾರ್ ಇವಾನಿಯೋಸ್ ಬಿ ಎಡ್ ಕಾಲೇಜು ವಾರ್ಷಿಕೋತ್ಸವ - ಶಿಕ್ಷಕ ವೃತ್ತಿಯ ಪಾವಿತ್ರ್ಯತೆಯನ್ನು ಉಳಿಸೋಣ- ಹರಿಶ್ಚಂದ್ರ ಕೆ

ಕಡಬ ತಾಲೂಕಿನ ಬಲ್ಯ ಗ್ರಾಮದ ಉಮೇಶ್ ಬಂಗೇರ ಎಂಬವರು ಪ್ರಸ್ತುತ ನಡೆಯುತ್ತಿರುವ ವಿದ್ಯಮಾನಗಳಿಂದ ಪ್ರೇರೆಪಿತರಾಗಿ ಅದಕ್ಕೊಂದು ಕಲ್ಪನೆಯ ಮೆರುಗು ನೀಡಿ ಸುಂದರ ಕಥೆಯನ್ನು ರಚಿಸಿದ್ದಾರೆ, ಅಲ್ಲದೆ ಅದಕ್ಕೆ ನಿರ್ದೇಶನ ನೀಡಿ ಸುಮಾರು 1 ಗಂಟೆಗಳ ಕಾಲದ ಕಿರು ಚಿತ್ರವನ್ನು ನಿರ್ಮಿಸಿದ್ದಾರೆ, ಇವರಿಗೆ ಯಾವುದೇ ಫಲಾಫೇಕ್ಷೆ ಇಲ್ಲದೆ ಕಡಬದ ಸಂತೋಷ್ ಸುವರ್ಣ ಕೋಡಿಬೈಲು ಹಾಗೂ ಕಟ್ಟಡ ಗುತ್ತಿಗೆದಾರ ರವಿ ಪಾದೆಯವರು ನಿರ್ಮಾಪಕರಾಗಿ ಸಾಥ್ ನೀಡಿದ್ದಾರೆ. ಇದರ ಚಿತ್ರೀಕರಣವನ್ನು ಉದಯ ಆಚಾರ್ಯ ಬಲ್ಯ ಅವರು ನಡೆಸಿದರೆ ಕಲಾವಿದರಾಗಿ ಗ್ರಾಮೀಣ ಪ್ರದೇಶದ ಸುಮಾರು 30 ಕ್ಕಿಂತಲೂ ಹೆಚ್ಚು ಮಂದಿ ಈ ಚಿತ್ರದಲ್ಲಿ ನಟಿಸಿದ್ದಾರೆ. ಕಳೆದ ಸೆಪ್ಟಂಬರ್ ತಿಂಗಳಿನಲ್ಲಿ ಪ್ರಾರಂಭವಾದ ಚಿತ್ರಿಕರಣ, ಮುಂದಿನ ಡಿಸೆಂಬರ್ ತಿಂಗಳಿನಲ್ಲಿ ಚಿತ್ರ ಕಡಬದಲ್ಲಿ ಬಿಡುಗಡೆಯಾಗಲಿದೆ. ಕಡಬ ತಾಲೂಕಿನ ಪ್ರದೇಶಗಳಲ್ಲಿ ಇದರ ಚಿತ್ರಿಕರಣ ನಡೆದಿದ್ದು, ಇದರಲ್ಲಿ ಯಾವುದೇ ಸಂಭಾವನೆ ಇಲ್ಲದೆ ಗ್ರಾಮೀಣ ಪ್ರದೇಶದ ಪ್ರತಿಭೆಗಳು ತಮ್ಮ ಪಾತ್ರಗಳನ್ನು ಅಚ್ಚುಕಟ್ಟಾಗಿ ನಿರ್ವಹಿಸಿದ್ದಾರೆ. ಕಡಿಮೆ ಖರ್ಚಿನಲ್ಲಿ ನಿರ್ಮಿಸಲಾದ ಈ ಚಿತ್ರಕ್ಕೆ ಚಿತ್ರಿಕರಣವನ್ನು ಸ್ಥಳೀಯ ಅರಣ್ಯ ಪ್ರದೇಶದ ಪರಿಸರದಲ್ಲಿ ನಡೆಸಲಾಗಿದೆ.

Also Read  LPG ಗ್ರಾಹಕರಿಗೆ ಶಾಕ್ ➤ ಲಾಕ್ ಡೌನ್ ಮಧ್ಯೆ ಸಿಲಿಂಡರ್ ದರ ಹೆಚ್ಚಳ

“ಜಂಗಲ್ ಜಾಕಿ” ಕಿರು ಚಿತ್ರದ
ರೂವಾರಿ ಉಮೇಶ್ ಬಂಗೇರ

ರಾತ್ರಿ ವೇಳೆ ಟೈಲರಿಂಗ್ ವೃತ್ತಿ, ಹಗಲು ಹಸಿ ಮೀನು ಮಾರಾಟ ಮಾಡುತ್ತಾ ಜೀವನ ನಿರ್ವಹಿಸುವ ಉಮೇಶ್ ಬಂಗೇರ ಅವರು 2005ರಲ್ಲಿ “ಮೆಂಟಲ್ ಮಂಜ” ಕನ್ನಡ ಚಲನ ಚಿತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಹವ್ಯಾಸಿ ಬರಹಗಾರರಾಗಿರುವ ಇವರು ಬೆಂಗಳೂರಿನಲ್ಲಿ ಸುಮಾರು 10 ವರ್ಷ ಟೈಲರಿಂಗ್ ವೃತ್ತಿಯನ್ನು ಮಾಡಿದ್ದಾರೆ. ಒಂದು ಕಾಲದಲ್ಲಿ ಕುಡಿತದ ಚಟಕ್ಕೆ ಬಲಿಯಾದ ಇವರು ಸುತ್ತ ಮುತ್ತಲಿನ ಜನರ ಕುಹಕದ ಮಾತಿಗೆ ಬಲಿಯಾಗಿದ್ದರು, ಬಳಿಕ ಶ್ರೀ ಕ್ಷೇತ್ರ ಧರ್ಮಸ್ಥಳ ಮದ್ಯವರ್ಜನ ಶಿಬಿರದ ಮೂಲಕ ತನ್ನ ಮದ್ಯದ ಚಟವನ್ನು ಬಿಟ್ಟು ಕ್ರಿಯಾಶೀಲ ವ್ಯಕ್ತಿಯಾದರು. ತನ್ನ ಸುತ್ತಮುತ್ತಲಿನ ಸಮಸ್ಯೆಗಳನ್ನು ತನ್ನದೇ ಶೈಲಿಯಲ್ಲಿ ಸಾಮಾಜಿಕ ಜಾಲತಾಣದ ಮೂಲಕ ಉಮೇಶ್ ಬಂಗೇರ ಹರಿಯ ಬಿಡುವ ಹವ್ಯಾಸ ಹೊಂದಿದ್ದಾರೆ. ಬಲ್ಯ ಗ್ರಾಮದ ಐತ್ತಪ್ಪ ಪೂಜಾರಿ ಚೆನ್ನಮ್ಮ ದೆಂಪತಿಯ ಪುತ್ರರಾಗಿರುವ ಇವರು ಪತ್ನಿ ಪ್ರೇಮ ಮಕ್ಕಳಾದ ಚಂದನಾ, ವಂದನ್‍ರವರೊಂದಿಗೆ ವಾಸವಾಗಿದ್ದಾರೆ.

error: Content is protected !!
Scroll to Top