ಖ್ಯಾತ ವಾಗ್ಮಿ ವಲಿಯುದ್ದೀನ್ ಫೈಝಿ, ನವಂಬರ್ 18-19 ರಂದು ಪಾಜಪಳ್ಳಕ್ಕೆ

 (ನ್ಯೂಸ್ ಕಡಬ) newskadaba.com  ಸುಳ್ಯ,  ನ.16  ಸುಳ್ಯ ತಾಲೂಕಿನ ಚರಿತ್ರೆ ಪ್ರಸಿದ್ಧ ಮುಹಿಯುದ್ದೀನ್ ಜುಮಾ ಮಸೀದಿ ಅಧೀನದಲ್ಲಿ ಕಾರ್ಯಾಚರಿಸುತ್ತಿರುವ ಮಿನ್ನತುಲ್ ಹುದಾ ಇದರ ಪಂಚವಾರ್ಷಿಕ ಸಲುವಾಗಿ ಮಾಹೇ ಮದೀನಾ ಈದ್ ಮೀಲಾದ್, ಸ್ವಲಾತ್ ವಾರ್ಷಿಕ ನವಂಬರ್ 18 ಹಾಗೂ 19 ರಂದು ಎರಡು ದಿವಸಗಳ ಮತಪ್ರಭಾಷಣ ನಡೆಯಲಿರುವುದು.

ಈ ಕಾರ್ಯಕ್ರಮದ ಸಭಾಧ್ಯಕ್ಷ ತೆಯನ್ನು ಮಸೀದಿ ಆಡಳಿತ ಸಮಿತಿ ಅಧ್ಯಕ್ಷ ಹಾಜಿ ಪಿ ಇಸಾಕ್ ಸಾಹೇಬ್ ಪಾಜಪಳ್ಳ ವಹಿಸಲಿದ್ದು, ಮಸೀದಿ ಖತೀಬ ಯಾಸರ್ ಅರಫಾತ್ ಕೌಸರಿ ಉದ್ಘಾಟಿಸಲಿದ್ದಾರೆ.ಈ ಕಾರ್ಯ ಕ್ರಮದಲ್ಲಿ ವಿವಿಧ ಸಾಮಾಜಿಕ ಶೈಕ್ಷಣಿಕ ನಾಯಕರು , ಉಲಮಾ ಉಮಾರ ನಾಯಕರು ಭಾಗವಹಿಸಲಿದ್ದಾರೆ. ಎರಡು ದಿವಸಗಳ ಕಾಲ ನಡೆಯುವ ಕಾರ್ಯಕ್ರಮವು ಮಯ್ಯತ್ ಪರಿಪಾಲನೆ ವಿಷಯ ಕುರಿತು ಕೇರಳದ ಹೆಸರಾಂತ ಪ್ರಭಾಷಣ ಗಾರ ಖ್ಯಾತ ವಾಗ್ಮಿ ವಲಿಯುದ್ದೀನ್ ಫೈಝಿ ಕೋಝಿಕ್ಕೋಡ್ ಪ್ರಭಾಷಣ ನಡೆಸಲಿರುವರು. ಎಲ್ ಇ ಡಿ ಸ್ಕ್ರೀನ್ ಅಳವಡಿಸುವುದರೊಂದಿಗೆ ಕ್ಲಿಪ್ಪಿಂಗ್ ಸಹಿತ ಪ್ರಭಾಷಣ ನಡೆಯಲಿರುವುದು, ಸ್ತ್ರೀ ಯರಿಗೆ ಪ್ರತ್ಯೇಕ ಸ್ಥಳವಕಾಶ ಇರಲಿದೆ ಎಂದು ಕಾರ್ಯಕ್ರಮ ಸಂಯೋಜಕರಾದ ಕೆ ಎಂ ಇಕ್ಬಾಲ್ ಬಾಳಿಲ ತಿಳಿಸಿರುತ್ತಾರೆ.

Also Read  ಸುಬ್ರಹ್ಮಣ್ಯ: ಬೈಕ್ - ಕಾರು ನಡುವೆ ಢಿಕ್ಕಿ ➤ ನಿವೃತ್ತ ಎಎಸ್ಐ ಮೃತ್ಯು

error: Content is protected !!
Scroll to Top