(ನ್ಯೂಸ್ ಕಡಬ) newskadaba.com ಕಡಬ, ನ.16 ಕಡಬ ಗ್ರಾ.ಪಂಗೆ ಒಳಪಟ್ಟ ಕಡಬ ಗ್ರಾಮದ ತುಂಬೆತ್ತಡ್ಕ ಎಂಬಲ್ಲಿ ಕಿಡಿಗೇಡಿಗಳು ತ್ಯಾಜ್ಯ ಹಾಕುತ್ತಿದ್ದು ಗ್ರಾ.ಪಂನ ಅಧ್ಯಕ್ಷ ಬಾಬು ಮುಗೇರರವರ ನೇತೃತ್ವದಲ್ಲಿ ನ.15ರಂದು ಕಸ ವಿಲೇವಾರಿ ಮಾಡಲಾಗಿದೆ.
ತ್ಯಾಜ್ಯ ಬಿಸಾಡುವವರ ಮೇಲೆ ಕ್ರಮಕ್ಕೆ ಮುಂದಾದ ಅಧ್ಯಕ್ಷರು ಅಧಿಕಾರಿಗಳಿಗೆ ಸೂಕ್ತ ನಿರ್ದೇಶನ ನೀಡಿದ್ದಾರೆ. ಹಲವಾರು ಸಮಯಗಳಿಂದ ಪರಿಸರದ ಕೆಲವರು ಕಿಡಿಗೇಡಿಗಳು ರಾತ್ರಿ ಹೊತ್ತಲ್ಲಿ ಕೋಳಿ ತ್ಯಾಜ್ಯ, ಸೇರಿದಂತೆ ಗಲಿಜು ವಸ್ತುಗಳನ್ನು ತಂದು ಹಾಕುತ್ತಿದ್ದು ಈ ಬಗ್ಗೆ ಹಲವಾರು ಸಲ ಗ್ರಾ.ಪಂನಿಂದ ಸ್ವಚ್ಚತೆಯ ಬಗ್ಗೆ ಕ್ರಮ ಕೈಗೊಂಡಿದ್ದರೂ ಗಮನಿಸದ ಕಿಡಿಗೇಡಿಗಳು ಮತ್ತೆ-ಮತ್ತೆ ಅಲ್ಲೇ ತಂದು ತ್ಯಾಜ್ಯ ಎಸೆಯುತ್ತಿದ್ದಾರೆ. ಕಡಬ ಗ್ರಾ.ಪಂ ಅಧ್ಯಕ್ಷರು, ಅಭಿವೃದ್ಧಿ ಅಧಿಕಾರಿ ಹಾಗೂ ಸಿಬ್ಬಂದಿಗಳು ನ.14ರಂದು ಪಿಜಕ್ಕಳ ಬಳಿಯ ತುಂಬೆತ್ತಡ್ಕಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದು ದುರ್ವಾಸನೆಯಿಂದ ಕೂಡಿದ ತ್ಯಾಜ್ಯದ ಮೂಟೆಗಳು ಕಂಡು ಬಂದಿದ್ದು ನ.15ರಂದು ತ್ಯಾಜ್ಯ ವಿಲೇವಾರಿ ಮಾಡುವ ಸಿಬ್ಬಂದಿಗಳೊಂದಿಗೆ ಗ್ರಾ.ಪಂ ಅಧ್ಯಕ್ಷ ಬಾಬು ಮುಗೇರರವರು ತುಂಬೆತ್ತಡ್ಕಕ್ಕೆ ತೆರಳಿ ತ್ಯಾಜ್ಯವನ್ನು ಪರಿಶೀಲಿಸಿದ್ದು ಕೊಳೆತ ತ್ಯಾಜ್ಯ, ಪ್ಲಾಸ್ಟಿಕ್, ಬಾಟಲಿ, ಕಸ, ಕಂಡು ಬಂದಿದ್ದು ತ್ಯಾಜ್ಯ ಎಸೆಯುವವರ ಮೇಲೆ ಸೂಕ್ತ ಕ್ರಮಕ್ಕೆ ಮುಂದಾಗಿದ್ದಾರೆ. ಈ ಸಂದರ್ಭದಲ್ಲಿ ನೂಜಿಬಾಳ್ತಿಲ ಗ್ರಾ.ಪಂ ಅಭಿವೃದ್ಧಿ ಅಧಿಕಾರಿ ಆನಂದರವರು ತ್ಯಾಜ್ಯವನ್ನು ಗಮನಿಸಿ ಎಷ್ಟೆ ತಿಳುವಳಿಕೆ ಮೂಡಿಸಿದರು ಮತ್ತೆ ತಮ್ಮ ಚಾಲಿ ಬಿಡದ ಕಿಡಿಗೇಡಿಗಳ ಮೇಲೆ ಸೂಕ್ತ ಕ್ರಮ ಅನಿವಾರ್ಯ ಎಂದರು.