ಕಲ್ಲುಗುಡ್ಡೆ ಅಂಗನವಾಡಿಯಲ್ಲಿ ಶೂ ವಿತರಿಸಿ ಮಕ್ಕಳ ದಿನಾಚರಣೆ ಆಚರಣೆ

 (ನ್ಯೂಸ್ ಕಡಬ) newskadaba.com ಕಲ್ಲುಗುಡ್ಡೆ, ನ.15  ನೂಜಿಬಾಳ್ತಿಲ ಗ್ರಾಮದ ಕಲ್ಲುಗುಡ್ಡೆ ಅಂಗನವಾಡಿಯಲ್ಲಿ ಮಕ್ಕಳ ದಿನಾಚರಣೆ ಚಾಚಾ ನೆಹರುರವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ, ಪುಟಾಣಿಗಳಿಗೆ ಶೂ ವಿತರಣೆ ಹಾಗೂ ಆಟೋಟ ಸ್ಪರ್ದೆಯಲ್ಲಿ ಪುಟಾಣಿಗಳಿಗೆ ಬಹುಮಾನ ವಿತರಣೆ ಮಾಡಿ ಆಚರಿಸಲಾಯಿತು.


ಪಂಡಿತ್‍ ಜವಾಹರ್ ಲಾಲ್ ನೆಹರುರವರ ಹುಟ್ಟುಹಬ್ಬದ ಪ್ರಯುಕ್ತ ನಡೆದ ಕಾರ್ಯಕ್ರಮದಲ್ಲಿ ಮಕ್ಕಳಿಗೆ ಪುತ್ತೂರು ಸತ್ಯಸಾಯಿ ಸೇವಾಸಮಿತಿ ಕೊಡುಗೆಯಾಗಿ ನೀಡಿದ ಶೂ ವಿತರಿಸಿದಲ್ಲದೆ, ಮಕ್ಕಳ ದಿನಾಚರಣೆ ಅಂಗವಾಗಿ ನಡೆಸಲಾಗಿದ್ದ ಮಕ್ಕಳ ಆಟೋಟ ಸ್ಪರ್ದೆಯಲ್ಲಿ ವಿಜೇತರಾದ ಹಾಗೂ ಭಾಗವಹಿಸಿದ ಎಲ್ಲಾ ಪುಟಾಣಿಗಳಿಗೆ ಬಹುಮಾನ ವಿತರಿಸಲಾಯಿತು. ಜವಾಹರ್ ಲಾಲ್‍ನೆಹರುರವರ ಭಾವಚಿತ್ರಕ್ಕೆ ನೂಜಿಬಾಳ್ತಿಲ ಗ್ರಾ.ಪಂ ಅಭಿವೃದ್ಧಿ ಅಧಿಕಾರಿ ಆನಂದ.ಎ ರವರು ಪುಷ್ಪಾರ್ಚನೆ ಮಾಡಿ ಮಾತನಾಡಿ, ಮಕ್ಕಳು ನಮ್ಮ ದೇಶದ ಆಸ್ತಿಯಾಗಿದ್ದು ಮುಂದಿನ ಭವಿಷ್ಯ ಮಕ್ಕಳ ಕೈಯಲ್ಲಿದೆ, ಚಾಚಾ ನೆಹರೂರವರ ತತ್ವ ಸಿದ್ಧಾಂತ ಆಚಾರ-ವಿಚಾರಗಳನ್ನು ತಮ್ಮಲ್ಲಿ ಉಳಿಸಿಕೊಳ್ಳುವ ಮೂಲಕ ಅವರ ಆದರ್ಶ ಪಾಲಿಸುವ ಸಂಸ್ಕಾರಯುತ ಸಂಸ್ಕೃತಿಯೊಂದಿಗೆ ದೇಶಕಟ್ಟುವ ಪ್ರಜೆಗಳಾಗಲಿ ಎಂದು ಹಾರೈಸಿದರು.

Also Read  ಕಡಬ: ನಾಳೆ (ಅ.26) ವಿದ್ಯುತ್ ನಿಲುಗಡೆ


ತೆಗೆರ್ ತುಳುಕೂಟದ ಸಂಚಾಲಕ ಉಮೇಶ್ ಶೆಟ್ಟಿ ಸಾಯಿರಾಂ, ಗ್ರಾ.ಪಂ ಸದಸ್ಯೆ ರಜಿತಾಪದ್ಮನಾಭ ಶುಭಹಾರೈಸಿದರು. ಅಂಗನವಾಡಿ ಬಾಲವಿಕಾಸ ಸಮಿತಿ ಅಧ್ಯಕ್ಷೆ ಭಾರತಿ ಅಧ್ಯಕ್ಷತೆ ವಹಿಸಿದ್ದರು. ಗ್ರಾ.ಪಂ ಮಾಜಿ ಉಪಾಧ್ಯಕ್ಷ ಅಂಗನವಾಡಿ ಪ್ರತಿನಿಧಿ ಕಿಟ್ಟು.ಕೆ ಕಲ್ಲುಗುಡ್ಡೆ, ಪ್ರಾಸ್ತಾವಿಕವಾಗಿ ಮಾತನಾಡಿದರು. ಸಿಹಿ ತಿಂಡಿಯ ವ್ಯವಸ್ಥೆಯನ್ನು ಕಿಟ್ಟು.ಕೆ ಕಲ್ಲುಗುಡ್ಡೆಯವರು ನೀಡಿದ್ದರು.
ಪುತ್ತೂರು ಸತ್ಯಸಾಯಿ ಸೇವಾ ಸಮಿತಿ ವತಿಯಿಂದ ರೋಹಿತಾಶ್ವ ಕಂಪ ಅವರು ಮಕ್ಕಳಿಗೆ ನೀಡಿದ ಶೂ ವನ್ನು ವಿತರಿಸಲಾಯಿತು.

error: Content is protected !!
Scroll to Top