ನ.18ರಂದು ಪ್ರಸಾರ ಭಾರತಿ ಮಾಜಿ ಅಧ್ಯಕ್ಷೆ ಮೃಣಾಲ್ ಪಾಂಡೆ ಕುರಿತ ಎರಡು ಕೃತಿಗಳ ಬಿಡುಗಡೆ

 (ನ್ಯೂಸ್ ಕಡಬ) newskadaba.com ಮಂಗಳೂರು, ನ.15  ಪ್ರಸಾರ ಭಾರತಿ ಮಾಜಿ ಅಧ್ಯಕ್ಷೆ, ಹಿಂದೂಸ್ತಾನ್ ಪತ್ರಿಕೆಯ ಸಂಪಾದಕಿಯಾಗಿದ್ದ ಮೃಣಾಲ್ ಪಾಂಡೆ ಅವರ ಕುರಿತಾದ ಎರಡು ಕೃತಿಗಳ ಬಿಡುಗಡೆ ಸಮಾರಂಭ ನವೆಂಬರ್ 18ರಂದು ಸಂಜೆ 4ಕ್ಕೆ ಮಂಗಳೂರು ಕುದ್ಮುಲ್ ರಂಗರಾವ್ ಪುರಭವನದಲ್ಲಿ ನಡೆಯಲಿದೆ.


ಹಿಂದಿ ಶಿಕ್ಷಕಿ ಡಾ.ಯಶೋಧಾ ಕರನಿಂಗ ಅವರು ಬರೆದಿರುವ ಕೃತಿಗಳನ್ನು ಮಂಗಳೂರು ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಪಿ.ಎಸ್.ಯಡಪಡಿತ್ತಾಯ ಅವರು ಬಿಡುಗಡೆ ಮಾಡಿ, ರಾಷ್ಟ್ರೀಯ ಸಾಮಾಜಿಕ ಸಾಂಸ್ಕೃತಿಕ ಅಭಿವೃದ್ಧಿ ಪ್ರತಿಷ್ಠಾನದ (ಎನ್ ಎಸ್ ಸಿಡಿಎಫ್)ವತಿಯಿಂದ ನಡೆಯುವ ಮೂರು ದಿನಗಳ ಸಂಸ್ಖೃತಿ ಸಂಭ್ರಮ ಕಾರ್ಯಕ್ರಮಕ್ಕೆ ಚಾಲನೆ ನೀಡುವರು. “ಮೃಣಾಲ್ ಪಾಂಡೆ ಕೇ ಕಥಾ ಮೇ ನಾರಿ ಚೇತನ” ಮತ್ತು ಅವರ ದೇವಿ ಕಾದಂಬರಿಯ ವಿಮರ್ಶಾ ಕೃತಿ “ಮೃಣಾಲ್ ಪಾಂಡೆ ಉಪನ್ಯಾಸ್ ಕ ನಯಾ ಸಂದರ್ಭ್” ಎಂಬ ಎರಡು ಹಿಂದಿ ಕೃತಿಗಳು ಈ ಸಂದರ್ಭದಲ್ಲಿ ಬಿಡುಗಡೆ ಆಗಲಿವೆ. ಪ್ರಸಾರ ಭಾರತಿಯ ಅಧ್ಯಕ್ಷೆಯಾಗಿದ್ದ ಮೃಣಾಲ್ ಪಾಂಡೆ ಅವರು ಕಳೆದ ಶತಮಾನದ ಮಹಿಳಾ ಪತ್ರಕರ್ತರಲ್ಲಿ ಪ್ರಮುಖರಾಗಿದ್ದಾರೆ.

Also Read  ದೇಶದ ಎಲ್ಲಾ ಶಾಲೆಗಳಲ್ಲಿ `CBSE' ಪಠ್ಯಕ್ರಮ ಜಾರಿ - ಪ್ರಧಾನಿ ಮೋದಿ ಘೋಷಣೆ


ಕೃತಿಗಳ ಲೇಖಕಿ ಉಡುಪಿ ಮರವಂತೆ ಶಾಲೆಯಲ್ಲಿ ಹಿಂದಿ ಶಿಕ್ಷಕಿಯಾಗಿದ್ದು, ಇದೀಗ ಶಿರಸಿಯ ಸರಕಾರಿ ಶಾಲೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಇದೇ ಸಂದರ್ಭದಲ್ಲಿ ಪತ್ರಕರ್ತ ಎಂ.ಎಂ.ಎ. ಶರೀಫ್ ಹಾಗೂ ರಂಗ ಕಲಾವಿದ ಇಂದುಶೇಖರ್ ಅವರನ್ನು ಸನ್ಮಾನಿಸಲಾಗುವುದು. ಪ್ರತಿಷ್ಠಾನದ ಅಧ್ಯಕ್ಷ ಗಂಗಾಧರ ಗಾಂಧಿ ಅಧ್ಯಕ್ಷತೆ ವಹಿಸಲಿದ್ದು, ನ್ಯಾಯವಾದಿ ಗಂಗಾಧರ ಉಳ್ಳಾಲ, ಲೇಖಕಿ ಯಶೋಧ ಕರನಿಂದ, ಸಾಮಾಜಿಕ ಕಾರ್ಯಕರ್ತೆ ಭಾರೀರತಿ ಬಿ.ಕೆ. ಕೊಡಗು, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ರಾಜೇಶ್, ದಿನಕರ ಡಿ.ಬಂಗೇರ, ಮಲ್ಲಿಕಾ ಅಜಿತ್ ಶೆಟ್ಟಿ ಭಾಗವಹಿಸುವರು. ನವೆಂಬರ್ 18ರಿಂದ 20ರ ತನಕ ಪ್ರತಿ ದಿನ ಸಂಜೆ ಪುರಭವನದಲ್ಲಿ ಸಂಸ್ಕೃತಿ ಸಂಭ್ರಮ ಅಂಗವಾಗಿ ಯಕ್ಷಗಾನ, ಜಾನಪದ ನೃತ್ಯ ಸಹಿತ ವೈವಿಧ್ಯಮಯ ಸಾಂಸ್ಕೃತಿ ಕಾರ್ಯಕ್ರಮಗಳು ಜರುಗಲಿವೆ.

Also Read  ಗೌರಿ ಗಣೇಶ ಹಬ್ಬ ➤ ಜಲಮೂಲಗಳಲ್ಲಿ ಪಿಒಪಿ ವಿಗ್ರಹಗಳ ವಿಸರ್ಜನೆ ನಿರ್ಬಂಧ

error: Content is protected !!
Scroll to Top