ವೇಗದ ನಡಿಗೆಯಲ್ಲಿ ನೂಜಿಬಾಳ್ತಿಲದ ಸ್ವಪ್ನ ರಾಷ್ಟ್ರಮಟ್ಟಕ್ಕೆ

 (ನ್ಯೂಸ್ ಕಡಬ) newskadaba.com ಕಲ್ಲುಗುಡ್ಡೆ, ನ.14  ಶ್ರೀ ಆದಿಚುಂಚನಗಿರಿ ಶಿಕ್ಷಣ ಟ್ರಸ್ಟ್ ಮತ್ತು ಸಾರ್ವಜನಿಕ ಶಿಕ್ಷಣ ಇಲಾಖೆ ಮಂಡ್ಯ ಇದರ ಆಶ್ರಯದಲ್ಲಿ ಮಂಡ್ಯದ ನೆಲಮಂಗಲದಲ್ಲಿ ನಡೆದ ರಾಜ್ಯಮಟ್ಟದ ಪ್ರೌಢಶಾಲಾ ಅಥ್ಲೆಟಿಕ್ ಕ್ರೀಡಾಕೂಟದ 3 ಕಿ.ಮೀ. ವೇಗದ ನಡಿಗೆಯಲ್ಲಿ ನೂಜಿಬಾಳ್ತಿಲ ಬೆಥನಿ ಪ್ರೌಢಶಾಲೆಯ 9ನೇ ತರಗತಿ ವಿದ್ಯಾರ್ಥಿನಿ ಸ್ವಪ್ನ ಪ್ರಥಮ ಸ್ಥಾನ ಪಡೆದು ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ.


ಇವರು ನೂಜಿಬಾಳ್ತಿಲ ಗ್ರಾಮದ ಕುರಿಯಾಳಕೊಪ್ಪ ದಿ. ನಾರಾಯಣ ಹಾಗೂ ಪುಷ್ಪಾ ದಂಪತಿಗಳ ಪುತ್ರಿ. ಇವರಿಗೆ ಸಂಸ್ಥೆಯ ಮುಖ್ಯ ಶಿಕ್ಷಕ ಸುಬ್ರಹ್ಮಣ್ಯ ಭಟ್ ಇವರ ಮಾರ್ಗದರ್ಶನದಲ್ಲಿ ದೈಹಿಕ ಶಿಕ್ಷಣ ಶಿಕ್ಷಕರಾದ ಮತ್ತಾಯಿ ಓ.ಜೆ. ಹಾಗೂ ಪುನೀತ್ ಕೆ. ತರಭೇತಿ ನೀಡಿರುತ್ತಾರೆ. ರಾಷ್ಟ್ರಮಟ್ಟದ ಕ್ರೀಡಾಕೂಟ ಡಿ.11ರಂದು ಪಂಜಾಬ್‍ನಲ್ಲಿ ನಡೆಯಲಿದೆ.

Also Read  ಪ.ಜಾತಿ/ ಪ.ಪಂಗಡದ ಎಲ್ಲಾ ಯೋಜನೆಗಳನ್ನು ಸಂಪೂರ್ಣವಾಗಿ ಅನುಷ್ಟಾನಗೊಳಿಸಬೇಕು ➤ ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ.ವಿ

error: Content is protected !!
Scroll to Top