(ನ್ಯೂಸ್ ಕಡಬ) newskadaba.com ನ.13 ವಿದ್ಯಾರ್ಥಿಗಳಲ್ಲಿ ಕೃಷಿಯ ಬಗ್ಗೆ ಅರಿವು ಮೂಡಿಸುವುದರ ಜೊತೆಗೆ ಅನ್ನದ ಬೆಲೆಯನ್ನು ತಿಳಿದುಕೊಳ್ಳುವ ಉದ್ದೇಶದಿಂದ ಸರಸ್ವತೀ ವಿದ್ಯಾಲಯದ ಪ್ರೌಢ ಹಾಗೂ ಪದವಿಪೂರ್ವ ವಿಭಾಗದ ವಿದ್ಯಾರ್ಥಿಗಳೇ ನೇಜಿ ನಾಟಿ ಬೆಳೆದ ಪೈರನ್ನು ಕಟಾವು ಮಾಡಿದರು.
ಸಂಸ್ಥೆಯ ಸಂಚಾಲಕ ಶ್ರೀ ವೆಂಕಟ್ರಮಣ ರಾವ್ ಮಂಕುಡೆ ಭತ್ತ ಕಟಾವು ಕಾರ್ಯಕ್ಕೆ ಚಾಲನೆ ನೀಡಿ ಕೃಷಿಕರೇ ದೇಶದ ಬೆನ್ನೆಲುಬು, ಕೃಷಿ ಕಾರ್ಯದಲ್ಲಿ ತೊಡಗಿರುವವರಿಗೆ ಯಾವತ್ತು ದುರ್ಭೀಕ್ಷೆ ಇಲ್ಲ ಎಂದರು. ಆಡಳಿತ ಮಂಡಳಿ ನಿರ್ದೇಶಕ ಶಿವ ಪ್ರಸಾದ್ ರೈ ಮೈಲೇರಿ ಮಾತನಾಡಿ ಆಧುನಿಕ ಯುಗದ ಭರಾಟೆಯಲ್ಲಿ ವಿದ್ಯಾರ್ಥಿಗಳಿಗೇ ಕೃಷಿಯಲ್ಲಿ ಆಸಕ್ತಿ ಕಡಿಮೆಯಾಗುತ್ತಿದ್ದು ವಿದ್ಯಾರ್ಥಿಗಳಲ್ಲಿ ಕೃಷಿಯ ಆಸಕ್ತಿ ಮೂಡಿಸಲು ಇಂತಹ ಚಟುವಟಿಕೆಗಳು ಅನಿವಾರ್ಯ ಎಂದರು.
ಕೃಷಿ ಚಟುವಟಿಕೆಯಲ್ಲಿ ಆಡಳಿತ ಮಂಡಳಿ ನಿರ್ದೇಶಕಿ ಪ್ರಮೀಳಾ ಲೋಕೇಶ್, ಪೋಷಕಿ ಪೂರ್ಣಿಮಾ ರಾಮಚಂದ್ರ, ಗದ್ದೆಯ ಮಾಲಕ ನಾರಾಯಣ ಗೌಡ ಸಂಕೇಶ, ಉಪನ್ಯಾಸಕ ನಾಗರಾಜ್ ಉಪಸ್ಥಿತರಿದ್ದರು.