ಜೂಜಾಟ ಆಡುತ್ತಿದ್ದವರು ಪೊಲೀಸರ ವಶಕ್ಕೆ

(ನ್ಯೂಸ್ ಕಡಬ) newskadaba.com  ಧರ್ಮಸ್ಥಳ,  ನ.13  ಕೋಳಿ ಅಂಕ ಜೂಜಾಟ ಆಡುತ್ತಿದ್ದವರ ಪೈಕಿ 5 ಮಂದಿಯನ್ನು ಪೊಲೀಸರು ವಶಕ್ಕೆ ತೆಗೆದುಕೊಂಡ ಘಟನೆ ಬೆಳ್ತಂಗಡಿ ತಾಲೂಕು ಕಳೆಂಜ ಗ್ರಾಮದ ಶಿಬರಾಜೆ ಎಂಬಲ್ಲಿ ಮಂಗಳವಾರದಂದು ನಡೆದಿದೆ.

ಅವರ ವಶದಿಂದ ವಿವಿಧ ಜಾತಿಯ ಒಟ್ಟು 8 ಹುಂಜ ಕೋಳಿಗಳನ್ನು ಮತ್ತು ಒಟ್ಟು 730 ರೂಪಾಯಿ ನಗದು ಹಣವನ್ನು ಸ್ವಾಧೀನ ಪಡಿಸಿಕೊಂಡಿರುವುದಾಗಿ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

error: Content is protected !!
Scroll to Top