ಕಳವು

 (ನ್ಯೂಸ್ ಕಡಬ) newskadaba.com  ವೇಣೂರು,  ನ.13  ಮನೆಯ ಹಿಂದಿನ ಮತ್ತು ಮುಂದಿನ ಬಾಗಿಲಿಗೆ ಬೀಗ ಹಾಕಿಕೊಂಡು ಮನೆ ಸಮೀಪದ ವಿಷ್ಣುಮೂರ್ತಿ ದೇವಸ್ಥಾನದ ಪೂಜೆಗೆಂದು ಹೋದವರ ಮನೆಯಲ್ಲಿ ಸುಮಾರು 32000 ರೂ ಮೌಲ್ಯದ ಸೊತ್ತು ಬೆಳ್ತಂಗಡಿ ತಾಲೂಕಿನ ಇಳಂತಿಲ ಗ್ರಾಮದಲ್ಲಿ ಮಂಗಳವಾರದಂದು ಕಳವಾಗಿದೆ.

ಶ್ರೀಮತಿ ಕುಸುಮಾ ತನ್ನ ಕುಟುಂಬದೊಂದಿಗೆ ದೇವಸ್ಥಾನದ ಪೂಜೆ ಮುಗಿಸಿಕೊಂಡು ಮನೆಗೆ ಬಂದು ನೋಡಿದಾಗ ಮನೆಯಲ್ಲಿರುವ ಸಾಮಾನು ಚೆಲ್ಲಪಿಲ್ಲಿ ಯಾಗಿರುವುದನ್ನು ಗಮನಿಸಿದರು ಮತ್ತು ಗ್ವಾಡ್ರೇಜ್ ನಲ್ಲಿ ಇಟ್ಟಿದ್ದ ಸುಮಾರು 6 ಗ್ರಾಂ ತೂಕದ ಜುಮುಕಿ ಸಹಿತ ಬೆಂಡೋಲೆ ಒಂದು ಜೊತೆ ಇದರ ಅಂದಾಜು ಮೌಲ್ಯ 15000/-, ಸುಮಾರು 3 ಗ್ರಾಂ ತೂಕದ ಜುಮುಕಿ ಒಂದು ಜೊತೆ ಇದರ ಅಂದಾಜು ಮೌಲ್ಯ ಸುಮಾರು 6000/- ಮತ್ತು ಮನೆಯ ಒಳಗೆ ಇಟ್ಟಿದ್ದ ಟಿ .ವಿ, ಇದರ ಅಂದಾಜು ಮೌಲ್ಯ ಸುಮಾರು 6000 ರೂ ಮತ್ತು ಒಂದು ಜೊತೆ ಬೆಳ್ಳಿಯ ಕಾಲುಗೆಜ್ಜೆ ಅದರ ಅಂದಾಜು ಮೌಲ್ಯ ಸುಮಾರು 2000 ರೂ ಹಾಗೂ ಗ್ವಾಡ್ರೇಜ್ ನಲ್ಲಿಟ್ಟಿದ್ದ 3000 ರೂ ನಗದು ಕಳವಾಗಿರುತ್ತದೆ. ಕಳವಾದ ಒಟ್ಟು ಸೊತ್ತಿನ ಮೌಲ್ಯ ಸುಮಾರು 32000 ರೂ ಆಗಬಹುದು. ಎಂದು ವೇಣೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

Also Read  ಸುಳ್ಯ: ಮಹಡಿಯಿಂದ ಜಿಗಿದು ಯುವಕ ಮೃತ್ಯು

error: Content is protected !!
Scroll to Top