ಕುಕ್ಕೆಗೆ ಆಗಮಿಸಿದ ಶಿಕ್ಷಣ ಸಚಿವರು

 (ನ್ಯೂಸ್ ಕಡಬ) newskadaba.com  ಸುಬ್ರಹ್ಮಣ್ಯ,  ನ.12  ಜನ್ಮ ದಿನ ಆಚರಣೆಯ ಸಲುವಾಗಿ ಪತ್ನಿ ಸಾವಿತ್ರಿಯೊಂದಿಗೆ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಸುರೇಶ್ ಕುಮಾರ್ ಸೋಮವಾರದಂದು ಕುಕ್ಕೆ ಸುಬ್ರಹ್ಮಣ್ಯ ದೇಗುಲಕ್ಕೆ ಆಗಮಿಸಿ ವಿಶೇಷ ಪೂಜೆ ಸಲ್ಲಿಸಿದರು.

ಅರ್ಚಕ ರಾಜೇಶ್ ಅವರು ಸಚಿವರನ್ನು ಶಾಲು ಹೊದೆಸಿ ಪ್ರಸಾದ ನೀಡಿ ಹರಸಿದರು. ಸಚಿವರು ಆರಂಭದಲ್ಲಿ ಆದಿಶೇಷ ವಸತಿಗೃಹದಲ್ಲಿ ತುಸು ಕಾಲ ವಿಶ್ರಾಂತಿ ಪಡೆದು ಬಳಿಕ ದೇವಸ್ಥಾನಕ್ಕೆ ತೆರಳಿದರು. ಗೋಪುರದ ಮುಂದೆ ನೂತನ ಬ್ರಹ್ಮರಥಕ್ಕೆ ನಡೆಯುತ್ತಿರುವ ಬ್ರಹ್ಮರಥದ ವೈದಿಕ ಕಾರ್ಯಕ್ರಮದಲ್ಲಿ ಕೆಲ ಹೊತ್ತು ಪಾಲ್ಗೊಂಡು ರಥದ ವೀಕ್ಷಣೆ ನಡೆಸಿದರು. ಬಳಿಕ ನರಸಿಂಹ ಗುಡಿ ಹಾಗೂ ಹೊಸಳಿಗಮ್ಮ ದೇವರ ಗುಡಿಗಳಿಗೂ ತೆರಳಿ ಪ್ರಸಾದ ಸ್ವೀಕರಿಸಿದರು. ದೇವಸ್ಥಾನದಲ್ಲಿ ಮಧ್ಯಾಹ್ನದ ಅನ್ನಪ್ರಸಾದ ಸೇವಿಸಿದರು. .ಸಚಿವರ ಆಗಮನದ ವೇಳೆ ಯಾವುದೇ ಅಂಗರಕ್ಷಕ ಪಡೆ ಅವರ ಜೊತೆಗಿರಲಿಲ್ಲ. ಸ್ಥಳೀಯ ಪೊಲೀಸರಿಗೂ ಅವರ ಆಗಮನದ ಕುರಿತು ಮಾಹಿತಿ ಇರಲಿಲ್ಲ.

Also Read  ಜಿಲ್ಲಾ ಮಟ್ಟದ ಖೋ ಖೋ ಪಂದ್ಯಾಟ ➤ ಹಳೆನೇರೆಂಕಿ ಚಾಂಪಿಯನ್

error: Content is protected !!
Scroll to Top