(ನ್ಯೂಸ್ ಕಡಬ) newskadaba.com ನೆಲ್ಯಾಡಿ ನ.12 ವಿದ್ಯಾರ್ಥಿಗಳಲ್ಲಿ ನೀರು ಕುಡಿಯುವುದು ಅಭ್ಯಾಸ ಆಗಬೇಕು ಎಂಬ ನಿಟ್ಟಿನಲ್ಲಿ ವಾಟರ್ ಬೆಲ್ ಕಾರ್ಯಕ್ರಮವನ್ನು ಜ್ಞಾನೋದಯ ಬೆಥನಿ ಪದವಿ ಪೂರ್ವ ಕಾಲೇಜಿನಲ್ಲಿ ಸೋಮವಾರದಂದು ಡಾ| ಸುಪ್ರೀತ್ ಲೋಬೋ ಅವರು ಉದ್ಘಾಟಿಸಿದರು.
ನೀರು ನಮ್ಮ ದೇಹಕ್ಕೆ ಅತೀ ಹೆಚ್ಚು ಅಗತ್ಯವಿದೆ. ದೇಹದ ತಾಪಮಾನವನ್ನು ಕಾಯ್ದಿರಿಸುವ ಸಾಮರ್ಥ್ಯ ನೀರಿಗಿದೆ. ದೇಹದ ಪಚನ ಶಕ್ತಿಯು ಸರಿಯಾಗಿಸಲು ನೀರು ಮುಖ್ಯ. ಅದೇ ರೀತಿ ವಿವಿಧ ಹಂತಗಳಲ್ಲಿರುವ ವಿದ್ಯಾರ್ಥಿಗಳು ಹಾಗೂ ಇತರರು ಎಷ್ಟೆಷ್ಟು ಪ್ರಮಾಣದಲ್ಲಿ ನೀರು ಕುಡಿಯಬೇಕು? ಮತ್ತು ನೀರಿನ ಇತರ ಪ್ರಯೋಜನಗಳು ಏನೆಲ್ಲಾ? ನೀರು ಕುಡಿಯದಿದ್ದರೆ ಏನೆಲ್ಲಾ ತೊಂದರೆಗಳಾಗಬಹುದು? ಎಂಬುದನ್ನು ಸವಿವರವಾಗಿ ಜ್ಞಾನೋದಯ ಬೆಥನಿ ಪದವಿ ಪೂರ್ವ ಕಾಲೇಜಿನ ಹಳೆ ವಿದ್ಯಾರ್ಥಿ ಹಾಗೂ ಜೋಯ್ಸ್ ಆಯುರ್ವೇದಿಕ್ ಆಸ್ಪತ್ರೆ ಇದರ ಮಾಲಕರೂ ಆಗಿರುವ ಡಾ| ಸುಪ್ರೀತ್ ಲೋಬೋ ವಿದ್ಯಾರ್ಥಿಗಳಿಗೆ ಹೇಳಿದರು.
ಈ ಸಂದರ್ಭದಲ್ಲಿ ಸಂಸ್ಥೆಯ ಪ್ರಾಂಶುಪಾಲರಾದ ರೆ|ಫಾ| ಮ್ಯಾಥ್ಯೂ ಪ್ರಫುಲ್ ಒ.ಐ.ಸಿ. ಯವರು ಇನ್ನು ಮುಂದೆ ನೀರು ಕುಡಿಯುವುದಕ್ಕಾಗಿ ಸುಮಾರು 11 ಗಂಟೆ ವೇಳಗೆ ಒಂದು ಬೆಲ್ ಮುಖಾಂತರ ವಿದ್ಯಾಥಿಗಳನ್ನು ನೆನಪಿಸಲಾಗುವುದು ಎಂದು ಹೇಳಿದರು. ಶಾಲಾ ಅಸಂಬ್ಲಿಯಲ್ಲಿ ವಿದ್ಯಾರ್ಥಿಗಳು, ಅಧ್ಯಾಪಕರು ಹಾಗೂ ಉಳಿದ ಎಲ್ಲರೂ ನೀರು ಕುಡಿಯುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.