(ನ್ಯೂಸ್ ಕಡಬ) newskadaba.com ಕಲ್ಲುಗುಡ್ಡೆ, ನ.9 ನೂಜಿಬಾಳ್ತಿಲ ಗ್ರಾಮದ ಕಲ್ಲುಗುಡ್ಡೆ ಅಂಗನವಾಡಿ ಕೇಂದ್ರದ ಮೇಲ್ಚಾವಣಿ ಕಟ್ಟಡ ಕಾಮಗಾರಿ ಪ್ರಗತಿಯಲ್ಲಿದ್ದು ಗುರುವಾರ ಸ್ಥಳೀಯ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಬೇಟಿ ನೀಡಿ ಪರಿಶೀಲನೆ ನಡೆಸಿದರು.
ಜಿ.ಪಂ. ಅನುದಾನದಲ್ಲಿ ಮಂಜುರಾದ ರೂ.2 ಲಕ್ಷ ಅನುದಾನದಲ್ಲಿ ಅಂಗನವಾಡಿ ಕಟ್ಟಡದ ಮೇಲ್ಚಾವಣಿ ಕಾಮಗಾರಿ ನಡೆಸಲಾಗುತ್ತಿದ್ದು, ಈಗಾಗಲೇ ಗುಣಮಟ್ಟದ ಮೇಲ್ಚಾವಣಿ ಹಾಗೂ ಸ್ಟೇರ್ ಕೇಸ್( ಏಣಿ) ನಿರ್ಮಿಸಲಾಗಿದೆ. ಕಾಮಗಾರಿ ಪರಿಶೀಲಿಸಿ ಮಾತನಾಡಿದ, ಜಿ.ಪಂ. ಸದಸ್ಯ ಪಿ.ಪಿ. ವರ್ಗೀಸ್ ಜಿ.ಪಂ. ಕ್ಷೇತ್ರ ವ್ಯಾಪ್ತಿಯಲ್ಲಿ ಎಲ್ಲಾ ಕಡೆಗಳಲ್ಲೂ ಅತ್ಯುತ್ತಮ ಕಟ್ಟಡ ಹಾಗೂ ಮೂಲಸೌಕರ್ಯಗಳ ಬಗ್ಗೆ ಮುತುವರ್ಜಿ ವಹಿಸಲಾಗಿ, ಅಭಿವೃದ್ಧಿಗೆ ಒತ್ತು ನೀಡಲಾಗುತ್ತಿದೆ ಎಂದರು. ಪುತ್ತೂರು ತಾ.ಪಂ. ಎನ್.ಆರ್.ಇ.ಜಿ. ಸಹಾಯಕ ನಿರ್ದೇಶಕ ಸಂದೇಶ್ ಮಾತನಾಡಿ, ಇಚ್ಚಾಶಕ್ತಿಯಿಂದ ಗುಣಮಟ್ಟವನ್ನು ಕಾಯ್ದುಕೊಂಡು ಕಾಮಗಾರಿ ನಡೆಸಿದಲ್ಲಿ ಎಲ್ಲವೂ ಉತ್ತಮವಾಗುತ್ತದೆ. ಪಿಡಿಒ ಅವರು ಕಾಮಗಾರಿ ನಡೆಸುವಾಗ ಆಗಾಗ ಪರಿಶೀಲಿಸಿದ್ದರಿಂದ ಉತ್ತಮ ಕಾಮಗಾರಿ ನಡೆಯಲು ಸಾಧ್ಯವಾಗಿದೆ ಎಂದರು.
ಗ್ರಾ.ಪಂ ಅಧ್ಯಕ್ಷ ಸದಾನಂದ ಗೌಡ ಸಾಂತ್ಯಡ್ಕ ಮಾತನಾಡಿ, ನಮ್ಮ ಗ್ರಾ.ಪಂ. ವ್ಯಾಪ್ತಿಯಲ್ಲಿ ಎಂಟು ಅಂಗನವಾಡಿ ಗಳಿದ್ದು ಎಲ್ಲಾ ಅಂಗನವಾಡಿಗಳ ಅಭಿವೃದ್ಧಿಗೆ ಪೂರಕ ಸ್ಪಂದಿಸಲಾಗುತ್ತಿದೆ, ಪಂಚಾಯತ್ ಬಳಿಯಿರುವ ಈ ಕಲ್ಲುಗುಡ್ಡೆ ಅಂಗನವಾಡಿಗೆ ಹೆಚ್ಚಿನ ಮುತುವರ್ಜಿ ವಹಿಸಲಾಗಿದೆ ಎಂದರು.
ಪಿಡಿಒ ಆನಂದ ಅವರು ಮಾಹಿತಿ ನೀಡಿ ಜಿ.ಪಂ.ನಿಂದ ಬಂದ ಎರಡು ಲಕ್ಷ ಅನುದಾನದಲ್ಲಿ ಮೇಲ್ಚಾವಣಿ ಹಾಗೂ ಸ್ಟೇರ್ ಕೇಸ್(ಏಣಿ) ನಿರ್ಮಿಸಲಾಗಿದ್ದು ಇನ್ನು ಗ್ರಾ.ಪಂ. ನಿಂದ ಹೆಚ್ಚಿನ ಅನುದಾನ ನೀಡುವ ಮೂಲಕ ಟ್ಯಾರೀಸ್ ಸುತ್ತ ಗೋಡೆ ನಿರ್ಮಿಸಲಾಗುವುದು ಎಂದರು. ಜಿ.ಪಂ. ಇಂಜಿನಿಯರ್ ಭರತ್ ರವರು ಕಾಮಗಾರಿ ಮಾಹಿತಿ ನೀಡಿದರು. ಈ ಸಂದರ್ಭದಲ್ಲಿ ಗ್ರಾ.ಪಂ. ಸದಸ್ಯೆ ರಜಿತಾಪದ್ಮನಾಭ, ಪ್ರಮುಖರಾದ ತೋಮಸ್ ಇಡೆಯಾಳ, ಜೋಸ್ ಗಿರಿ ಉಪಸ್ಥಿತರಿದ್ದರು.