ನೂಜಿಬಾಳ್ತಿಲ ಬೆಥನಿ ವಿದ್ಯಾರ್ಥಿಗಳು ರಾಜ್ಯಮಟ್ಟಕ್ಕೆ

 (ನ್ಯೂಸ್ ಕಡಬ) newskadaba.com  ಕಲ್ಲುಗುಡ್ಡೆ,  ನ.ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್, ಸಾರ್ವಜನಿಕ ಶಿಕ್ಷಣ ಇಲಾಖೆ ಮಂಗಳೂರು ಹಾಗೂ ಕಾವೂರು ಬಿ.ಜಿ.ಎಸ್. ವಿದ್ಯಾಸಂಸ್ಥೆ ಸಹಯೋಗದಲ್ಲಿ ನಡೆದ ಜಿಲ್ಲಾ ಮಟ್ಟದ ಕ್ರೀಡಾಕೂಟದಲ್ಲಿ ನೂಜಿಬಾಳ್ತಿಲ ಬೆಥನಿ ವಿದ್ಯಾಸಂಸ್ಥೆಯ ವಿದ್ಯಾರ್ಥಿಗಳು ವಿಜೇತರಾಗಿ ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದಾರೆ.


ಜಿತೇಶ್ 3 ಸಾವಿರ ಮೀಟರ್ ಓಟದಲ್ಲಿ ಪ್ರಥಮ, 1500 ಮೀಟರ್ ಓಟದಲ್ಲಿ ದ್ವಿತೀಯ, ಸ್ವಪ್ನ 3 ಕಿ.ಮೀ. ವೇಗದ ನಡಿಗೆಯಲ್ಲಿ ಪ್ರಥಮ ಸ್ಥಾನ, ಸೌಮ್ಯ 400 ಮೀಟರ್ ಓಟದಲ್ಲಿ ದ್ವಿತೀಯ ಸ್ಥಾನ, ಉಷಾ 600 ಮೀಟರ್ ಓಟದಲ್ಲಿ ದ್ವಿತೀಯ, ಆಶ್ಲೇಷ್ 5 ಕಿ.ಮೀ. ವೇಗದ ನಡಿಗೆಯಲ್ಲಿ ದ್ವಿತೀಯ ಸ್ಥಾನಗಳನ್ನು ಪಡೆದುಕೊಂಡಿದ್ದಾರೆ. ವಿದ್ಯಾರ್ಥಿಗಳು ಒಟ್ಟು 2 ಚಿನ್ನ ಹಾಗೂ 5 ಬೆಳ್ಳಿಯ ಪದಕಗಳನ್ನು ಪಡೆದಿರುತ್ತಾರೆ. ವಿಜೇತರಾದ ವಿದ್ಯಾರ್ಥಿಗಳು ನ.12ರಿಂದ 14ರ ವರೆಗೆ ಮಂಡ್ಯದ ನೆಲಮಂಗಲದಲ್ಲಿ ನಡೆಯುವ ರಾಜ್ಯಮಟ್ಟದ ಕ್ರೀಡಾಕೂಟಕ್ಕೆ ಆಯ್ಕೆಯಾಗಿರುತ್ತಾರೆ. ವಿದ್ಯಾರ್ಥಿಗಳಿಗೆ ಸಂಸ್ಥೆಯ ದೈಹಿಕ ಶಿಕ್ಷಣ ಶಿಕ್ಷಕರಾದ ಮತ್ತಾಯಿ ಓ.ಜೆ. ಹಾಗೂ ಪುನೀತ್ ಅವರು ತರಭೇತಿ ನೀಡಿರುತ್ತಾರೆ.

Also Read  ತನ್ನ ಪತ್ನಿ ಮತ್ತು ಮಗಳಿಗೆ ಕೊರೋನಾ ಸೋಂಕು ದೃಢ..!!! ➤ ವೈದ್ಯಕೀಯ ಶಿಕ್ಷಣ ಸಚಿವ ಡಾ. ಕೆ. ಸುಧಾಕರ್‌ ಟ್ವೀಟ್

error: Content is protected !!
Scroll to Top