ಅನುಮಾನಕ್ಕೀಡಾದ 7ನೇ ತರಗತಿ ಪಬ್ಲಿಕ್ ಪರೀಕ್ಷೆ

(ನ್ಯೂಸ್ ಕಡಬ) newskadaba.com   ಬೆಂಗಳೂರು, ನ.8   ಪಬ್ಲಿಕ್ ಪರೀಕ್ಷೆಯನ್ನು ಏಳನೇ ತರಗತಿ ವಿದ್ಯಾರ್ಥಿಗಳಿಗೆ ನಡೆಸುವುದು ರಾಜ್ಯ ಸರಕಾರದ ಚಿಂತನೆಯಾಗಿದ್ದು, ಆದರೆ ಪ್ರಸಕ್ತ ಶೈಕ್ಷಣಿಕ ವರ್ಷದಲ್ಲಿ ಅನುಷ್ಠಾನಕ್ಕೆ ತರುವುದು ಅನುಮಾನವಾಗಿದೆ.

ಸಾರ್ವಜನಿಕ ಶಿಕ್ಷಣ ಇಲಾಖೆ ಅಥವಾ ಸರಕಾರ ಏಳನೇ ತರಗತಿ ವಿದ್ಯಾರ್ಥಿಗಳಿಗೆ ಪರೀಕ್ಷೆ ನಡೆಸಲು ಬೇಕಾದ ಯಾವುದೇ ಸಿದ್ಧತೆಯನ್ನು ಇನ್ನೂ ಮಾಡಿಕೊಂಡಿಲ್ಲ. ಈ ಸಂಬಂಧ ಸರಕಾರದಿಂದ ಅಧಿಕೃತ ಆದೇಶ ಅಥವಾ ನಿರ್ದೇಶನವೂ ಸಾರ್ವಜನಿಕ ಶಿಕ್ಷಣ ಇಲಾಖೆಗೆ ತಲುಪಿಲ್ಲ .  ಪರೀಕ್ಷೆಗೆ ಕೇವಲ 4  ತಿಂಗಳಿದ್ದು ಈ ಹಂತದಲ್ಲಿ ಹೊಸ ಪದ್ಧತಿ ಅನುಷ್ಠಾನ ಗೊಂದಲಕ್ಕೆ ಕಾರಣವಾಗಬಹುದು ಎಂಬ ಅಭಿಪ್ರಾಯವಿದೆ.

Also Read  ಹೆಸರು ಲಕ್ಷ್ಮೀ.. ಲಿಂಗ ಗಂಡು.. ಬಸ್ ನಲ್ಲಿ ಫ್ರೀ ಪ್ರಯಾಣ ➤ ಗಲಿಬಿಲಿಗೊಂಡ ಕಂಡಕ್ಟರ್

ಪಬ್ಲಿಕ್ ಪರೀಕ್ಷೆಗೂ ಮುನ್ನ ಸಾಕಷ್ಟು ಸಿದ್ಧತೆ ಮಾಡಿಕೊಳ್ಳುವ ಜೊತೆಗೆ ವಿದ್ಯಾರ್ಥಿಗಳನ್ನು ಇದಕ್ಕೆ ಸಜ್ಜು ಮಾಡ ಬೇಕಾಗುತ್ತದೆ.  ಜೊತೆಗೆ ಶಿಕ್ಷಕರು ಅನೇಕ ರೀತಿಯಲ್ಲಿ ಸಿಧ್ದರಾಗಬೇಕಾಗುತ್ತದೆ. ಇದು ಯಾವುದೂ ನಡೆದಿಲ್ಲ. ಅಲ್ಲದೆ, ಪಬ್ಲಿಕ್ ಪರೀಕ್ಷೆ ನಡೆಯಲಿದೆಯೇ ಇಲ್ಲವೇ ಎಂಬ ಸ್ಪಷ್ಟ ಸಂದೇಶವೂ ಬಂದಿಲ್ಲ ಎಂದು ಉಪನಿರ್ದೇಶಕರೋರ್ವರು ತಿಳಿಸಿದರು.

error: Content is protected !!
Scroll to Top