ಈದ್ ಮೀಲಾದ್ , ಅಯೋಧ್ಯೆ ತೀರ್ಪು , ಟಿಪ್ಪು ಜಯಂತಿ ಹಿನ್ನೆಲೆ ಬೆಳ್ಳಾರೆ ಪೋಲಿಸ್ ಠಾಣೆಯಲ್ಲಿ ಶಾಂತಿ ಸಭೆ ;ಶಾಂತಿಯುತವಾಗಿ ಹಬ್ಬವನ್ನ ಆಚರಿಸಿ; ಅಯೋಧ್ಯೆ ತೀರ್ಪನ್ನ ಸಮಾನವಾಗಿ ಸ್ವೀಕರಿಸಿ ;ಈರಯ್ಯ ಡಿ ಎನ್ ಕರೆ

ಬೆಳ್ಳಾರೆ (ನ್ಯೂಸ್ ಕಡಬ ನ:07) : ಈದ್ ಮೀಲಾದ್ ,ಅಯೋಧ್ಯೆ ತೀರ್ಪು,ಟಿಪ್ಪು ಜಯಂತಿ ಹಿನ್ನೆಲೆ ಬೆಳ್ಳಾರೆ ಠಾಣಾ ವ್ಯಾಪ್ತಿಯ ಎಲ್ಲಾ ಮಸೀದಿ ,ಚರ್ಚ್, ದೇವಸ್ಥಾನ ,ಸಂಘ ಸಂಸ್ಥೆಗಳ ಪ್ರಮುಖರು ,ಜನಪ್ರತಿನಿಧಿಗಳು ,ಗ್ರಾಮಸ್ಥರೊಂದಿಗೆ ಶಾಂತಿ ಸಭೆಯು ನವಂಬರ್ 7 ರಂದು ರಾಜೀವ್ ಗಾಂಧೀ ಸಭಾಭವನದಲ್ಲಿ ನಡೆಯಿತು .
ಈದ್ ಮೀಲಾದ್ ಹಬ್ಬವನ್ನ ಯಾರಿಗೂ ತೊಂದರೆಯಾಗದಂತೆ ವ್ಯವಸ್ಥಿತವಾಗಿ ಆಚರಣೆ ಮಾಡಿ,ಯಾವುದೇ ಅಹಿತಕರ ಘಟನೆಗೆ ಎಡೆಮಾಡಿಕೊಡದೆ,ಮೀಲಾದ್ ಜಾಥಾ ನಡೆಸುವವರೇ ಇದ್ದರೆ ಅನುಮತಿ ಪಡೆಯಿರಿ ,ವಾಹನ ಜಾಥಕ್ಕೆ ಅವಕಾಶ ವಿರಲ್ಲ ಎಂದು ಹೇಳಿದರು.
ರಾಜ್ಯ ಸರಕಾರ ಟಿಪ್ಪು ಜಯಂತಿ ಯನ್ನ ನಿಷೇಧಿಸಿರುವುದರಿಂದ ನಿಯಮ ಪ್ರಕಾರ ಆಚರಣೆ ಗೆ ಅವಕಾಶ ವಿರುವುದಿಲ್ಲ.
ಅದರಂತೆ ಅಯೋಧ್ಯೆ ತೀರ್ಪು ಯಾರ ಪರ ಬಂದರೂ ಅದನ್ನ ಸಮಾನವಾಗಿ ಸ್ವೀಕರಿಸಿ, ತೀರ್ಪು ಕುರಿತು ಸಾರ್ವಜನಿಕ ಸ್ಥಳದಲ್ಲಿ  ವಿಜಯೋತ್ಸವ ಆಚರಣೆಗೆ ಅವಕಾಶ ವಿರುವುದಿಲ್ಲ, ಬೇರೆ ಯಾವುದೇ ಅಹಿತಕರ ಘಟನೆಗೆ ಎಡ ಮಾಡುವ ಸಂದರ್ಭ ಕಂಡಲ್ಲಿ  ನಮಗೆ ತಕ್ಷಣ ಮಾಹಿತಿ ನೀಡಿ ಸಹಕರಿಸಿ  ಎಂದು ಠಾಣಾಧಿಕಾರಿ ಈರಯ್ಯ ಡಿ ಎನ್ ಕರೆನೀಡಿದರು.
ಠಾಣೆಯ ಸಿಬ್ಬಂದಿ ವರ್ಗದವರು ಈ ಸಭೆಯಲ್ಲಿ ಉಪಸ್ಥಿತರಿದ್ದು ಸಹಕರಿಸಿದರು .
ವರದಿ ( ರಶೀದ್ ಬೆಳ್ಳಾರೆ )
error: Content is protected !!

Join the Group

Join WhatsApp Group