(ನ್ಯೂಸ್ ಕಡಬ) newskadaba.com ನೆಲ್ಯಾಡಿ, ನ.7 ಜ್ಞಾನೋದಯ ಬೆಥನಿ ಪದವಿ ಪೂರ್ವ ಕಾಲೇಜಿನ ಸಿಲ್ವರ್ ಜೂಬಿಲಿ ಸಭಾಂಗಣದಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ಮತ್ತು ಜ್ಞಾನೋದಯದ ಸ್ಕೌಟ್ ಗೈಡ್ಸ್ ನ ವತಿಯಿಂದ ಸೋಮವಾರ ಸಂಚಾರಿ ನಿಯಮಗಳ ಜನಜಾಗೃತಿ ಕಾರ್ಯಕ್ರಮ ಜರುಗಿತು.
ಈ ಸಂದರ್ಭದಲ್ಲಿ ಅಧ್ಯಕ್ಷ ಸ್ಥಾನವನ್ನು ವಹಿಸಿಕೊಂಡ ಸಂಸ್ಥೆಯ ಪ್ರಾಂಶುಪಾಲರಾದ ರೆ|ಫಾ| ಮ್ಯಾಥ್ಯೂ ಪ್ರಫುಲ್ ಒ.ಐ.ಸಿ. ಯವರು ಹದಿಹರೆಯದ ಯುವಕ ಯುವತಿಯರು ರಸ್ತೆ ಕಾನೂನುಗಳನ್ನು ಉಲಂಘನೆ ಮಾಡುತ್ತಾರೆ. ಸುರಕ್ಷಿತ ಚಾಲನೆಯನ್ನು ನಿರ್ವಹಿಸಿದರೆ ಅಪಘಾತ ನಡೆಯುವುದಿಲ್ಲ. ಈ ಸುರಕ್ಷತೆಯ ಜಾಗೃತಿ ಕಾರ್ಯಕ್ರಮವನ್ನು ಸದುಪಯೋಗ ಪಡಿಸಿಕೊಳ್ಳಿ ಎಂದು ವಿದ್ಯಾರ್ಥಿಗಳಿಗೆ ಹೇಳಿದರು. ಸಂಸ್ಥೆಯ ಖಜಾಂಚಿಯಾದ ರೆ|ಫಾ| ಐಸಕ್ ಸಾಮ್ ಒ.ಐ.ಸಿ ರಸ್ತೆ ನಿಯಮಗಳನ್ನು ಸರಿಯಾಗಿ ಪಾಲಿಸುದರಿಂದ ರಸ್ತೆ ಅಪಘಾತಗಳು ನಡೆಯುವುದಿಲ್ಲ. ಸಂಚಾರಿ ನಿಯಮಗಳನ್ನು ಸರಿಯಾಗಿ ಸದುಪಯೋಗ ಪಡಿಸಿಕೊಳ್ಳಿ ಎಂದು ಒತ್ತು ನೀಡಿ ಹೇಳಿದರು.
ಜನಜಾಗೃತಿ ಕಾರ್ಯಕ್ರಮವನ್ನು ಪುತ್ತೂರು ಸರ್ಕಲ್ ಇನ್‍ಸ್ಪೆಕ್ಟರ್ ನಾಗೇಶ್ ಕದ್ರಿ, ಪುತ್ತೂರು ಟ್ರಾಫಿಕ್ ಪಿ ಎಸ್ ಐ ಚೆಲುವಯ್ಯ ಇವರು ಮದ್ಯ ವ್ಯಸನ, ಲೈಂಗಿಕ ದೌರ್ಜನ್ಯ ಮತ್ತು ರಸ್ತೆ ನಿಯಮಗಳ ಬಗ್ಗೆ ಮಾಹಿತಿ ಕಾರ್ಯಾಗಾರವನ್ನು ಯಶಸ್ವಿಯಾಗಿ ನಿರ್ವಹಿಸಿದರು. ವೇದಿಕೆಯಲ್ಲಿ ಪುತ್ತೂರು ಟ್ರಾಫಿಕ್ ಹೆಡ್‍ಕೋನ್‍ಸ್ಟಬ್‍ಲ್ ಶಿವಪ್ರಸಾದ್ ಬುಡ್ರಿ ನಾಗರಾಜ್ ಮತ್ತು ಉಪ್ಪಿನಂಗಡಿ ಪೊಲೀಸ್ ಕಾನ್‍ಸ್ಟಬ್‍ಲ್ ಹಿತೋಶ್ ಕುಮಾರ್ ಉಪಸ್ಥಿತರಿದ್ದರು.