ಎನ್.ಎಸ್.ಎಸ್. ವಾರ್ಷಿಕ ಶಿಬಿರ ಸಮಾರೋಪ

 

(ನ್ಯೂಸ್ ಕಡಬ) newskadaba.com ಕಲ್ಲುಗುಡ್ಡೆ, ನ.7    ಕಡ್ಯ ಕೊಣಾಜೆ ಸರಕಾರಿ ಉ.ಹಿ.ಪ್ರಾ. ಶಾಲೆಯಲ್ಲಿ ಸುಬ್ರಹ್ಮಣ್ಯೇಶ್ವರ ಪದವಿ ಪೂರ್ವ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆಯ ವಾರ್ಷಿಕ ವಿಶೇಷ ಶಿಬಿರದ ಸಮಾರೋಪ ಸಮಾರಂಭವು ಮಂಗಳವಾರದಂದು ನಡೆಯಿತು.

ಕಡಬ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ರಮೇಶ್ ಕಲ್ಪುರೆ ಅವರು ಸಮಾರೋಪ ಭಾಷಣ ಮಾಡಿದರು. ತಾ.ಪಂ. ಸದಸ್ಯೆ ಪಿ.ವೈ. ಕುಸುಮ ಮಾತನಾಡಿ, ಬೆವರು ಸುರಿಸಿ ದುಡಿಯುವ ಕ್ಷಣಗಳು ದುಡಿಮೆಯ ಬೆಲೆಯನ್ನು ಕಲಿಸುತ್ತದೆ. ಶ್ರಮಕ್ಕೆ ತಕ್ಕ ಪ್ರತಿಫಲ ಖಂಡಿತ ಸಿಗುತ್ತದೆ. ಗ್ರಾಮೀಣ ಪ್ರದೇಶಗಳು ಅಭಿವೃದ್ಧಿ ಹೊಂದಿದೆ ಎಂದಾದರೆ ಹಿರಿಯ ಶ್ರಮ ಅಲ್ಲಿರುತ್ತದೆ. ಹೆತ್ತವರು, ಗುರುಹಿರಿಯರನ್ನು ಗೌರವಿಸಿ ಮುನ್ನಡೆದು ಬದುಕೋಣ ಎಂದರು.

Also Read  ಕಡಬ ತಾಲೂಕು ಸಮಸ್ತ ಸುನ್ನಿ ಮಹಲ್ಲಾ ಪೆಡರೇಶನ್ ರೂಪೀಕರಣ ಸಮಿತಿ ರಚನೆ

ಕೇವಲ ವಿಶೇಷ ಶಿಬಿರಗಳಲ್ಲಿ ಮಾತ್ರ ಶಿಬಿರಾರ್ಥಿಗಳು ಕೆಲಸ ಮಾಡದೇ, ತಮ್ಮ ತಮ್ಮ ಮನೆಗಳಲ್ಲೂ ಹೆತ್ತವರೊಂದಿಗೆ ಮನೆ, ಕೃಷಿ ಕಾರ್ಯಗಳಲ್ಲಿ ಕೈಜೋಡಿಸಿ. ಕಲಿಕೆಯಲ್ಲಿ ಹೊಸತನವಿರಲಿ, ಶಿಬಿರಗಳಲ್ಲಿ ಕಲಿತ ಪರಿಣಾಮಕಾರಿ ನಿಯಮಗಳನ್ನು ಜೀವನದಲ್ಲಿ ಅಳವಡಿಸಿ, ಸ್ವಚ್ಚತೆಯಲ್ಲಿ ಪ್ರತಿಯೊಬ್ಬರೂ ತೊಡಗಿಕೊಂಡಾಗ ಸ್ವಚ್ಛ ಸಮಾಜ ನಿರ್ಮಾಣವಾಗಲಿದೆ ಎಂದು ವಾಸುದೇವ ಭಟ್ ಕಡ್ಯ ಅವರು ತಿಳಿಸಿದರು.

ಕೊಣಾಜೆ ಶಾಲಾ ಮುಖ್ಯ ಶಿಕ್ಷಕ ರಾಮಕೃಷ್ಣ ಕೆ. ಮಾತನಾಡಿ, ಶಿಬಿರದಲ್ಲಿ ಶಿಬಿರಾರ್ಥಿಗಳು ಪಡೆಯುವ ಅನುಭವಗಳು ತಮ್ಮ ಜೀವನಕ್ಕೆ ಪ್ರೇರಣೆಯಾಗಲಿದ್ದು, ಸ್ಪರ್ಧಾತ್ಮಕ ಯುಗದಲ್ಲಿ ಬಹುಮುಖ ಪ್ರತಿಭೆ ಯಶಸ್ಸಿಗೆ ಮುಖ್ಯವಾಗಿದೆ ಎಂದರು. ಎಸ್.ಡಿ.ಎಂ.ಸಿ. ಅಧ್ಯಕ್ಷ ಶಿವಪ್ಪ ಗೌಡ ಮಾತನಾಡಿದರು. ಎಸ್.ಎಸ್.ಪಿ.ಯು. ಕಾಲೇಜಿನ ಪ್ರಾಂಶುಪಾಲೆ ಕೆ. ಸಾವಿತ್ರಿ ಅಧ್ಯಕ್ಷತೆ ವಹಿಸಿದ್ದರು. ಶಿಬಿರದ ನಾಯಕ ಹರಿಚಂದನ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಕೊನೆಗೆ ಶಿಬಿರದಲ್ಲಿ ಏರ್ಪಡಿಸಿದ್ದ ಸ್ಪರ್ದೆಗಳ ವಿಜೇತರಿಗೆ ಬಹುಮಾನ ವಿತರಿಸಲಾಯಿತು.

Also Read  ಕಡಬ: ಇಂದು ಲೋಕಾಯುಕ್ತ ಪೊಲೀಸರಿಂದ ಜನಸಂಪರ್ಕ ಸಭೆ

error: Content is protected !!
Scroll to Top