ನೆಲ್ಯಾಡಿ : ಪ್ರೌಢಶಾಲಾ ಮಟ್ಟದ ಕ್ರಿಕೆಟ್ ಪಂದ್ಯಾಟ ➤ಟೆಕ್ನೋ ಕಪ್-2019

(ನ್ಯೂಸ್ ಕಡಬ) newskadaba.com  ನೆಲ್ಯಾಡಿ, ನ.7  ನೆಲ್ಯಾಡಿ ಬೆಥನಿ ಕ್ರೀಡಾಂಗಣದಲ್ಲಿ ಪ್ರೌಢ ಶಾಲಾ ಮಟ್ಟದ ಕ್ರಿಕೆಟ್ ಪಂದ್ಯಾಟವನ್ನು ಬೆಥನಿ ಐಟಿಐ ಮತ್ತು ಜ್ಞಾನೋದಯ ಬೆಥನಿ ಪಿಯು ಕಾಲೇಜು ಇವುಗಳ ಜಂಟಿ ಆಶ್ರಯದಲ್ಲಿ ನ. 7 ರಂದು ನಡೆಸಲು ನಿರ್ಧರಿಸಲಾಗಿದೆ.


ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಪುತ್ತೂರು ತಾಲೂಕು ಶಾರೀರಿಕ ಶಿಕ್ಷಣಾಧಿಕಾರಿಗಳಾದ ಸುಂದರ ಗೌಡ, ನೆಲ್ಯಾಡಿ ಗ್ರಾ.ಪಂ. ಅಧ್ಯಕ್ಷರಾದ ಗಂಗಾಧರ ಶೆಟ್ಟಿ ಹೊಸಮನೆ, ಪುತ್ತೂರು ತಾಲೂಕು ಯುವ ಸಬಲೀಕರಣ ಹಾಗೂ ಉಪ ಕ್ರೀಡಾಧಿಕಾರಿಗಳಾದ ಮಾಮಚ್ಚನ್ ಎಂ., ಬೆಥನಿ ಸಂಸ್ಥೆಗಳು ನೆಲ್ಯಾಡಿಯ ಸಂಚಾಲಕರಾದ ರೆ|ಫಾ| ಡಾ| ವರ್ಗೀಸ್ ಕೈಪನಡುಕ್ಕ ಒಐಸಿ, ಜ್ಞಾನೋದಯ ಬೆಥನಿ ಪಿಯು ಕಾಲೇಜಿನ ಪ್ರಾಂಶುಪಾಲರಾದ ರೆ|ಫಾ| ಮ್ಯಾಥ್ಯೂ ಪ್ರಫುಲ್ ಒಐಸಿ, ಬೆಥನಿ ಸಂಸ್ಥೆಗಳು ನೆಲ್ಯಾಡಿ ಇದರ ಬರ್ಸರ್ ರೆ|ಫಾ| ಐಸಕ್ ಸ್ಯಾಮುವೇಲ್ ಒಐಸಿ ಭಾಗವಹಿಸಲಿದ್ದಾರೆ.

Also Read  ಆತೂರು ಶ್ರೀ ಸದಾಶಿವ ದೇವಸ್ಥಾನಕ್ಕೆ ಶಾಸಕಿ ಶಕುಂತಳಾ ಶೆಟ್ಟಿ ಭೇಟಿ

error: Content is protected !!
Scroll to Top