3154 ಅನರ್ಹ ಬಿಪಿಎಲ್ ಕಾರ್ಡ್ ರದ್ದು

(ನ್ಯೂಸ್ ಕಡಬ) newskadaba.com  ಪುತ್ತೂರು, ನ.6  ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಅನರ್ಹ ಬಿಪಿಎಲ್ ಪಡಿತರ ಚೀಟಿ ಪತ್ತೆ ಕಾರ್ಯ ಸರಕಾರದ ಆದೇಶದಂತೆ ಮುಂದುವರಿದಿದ್ದು, ಈವರೆಗೆ 3154 ರೇಷನ್ ಕಾರ್ಡ್ ಗಳನ್ನು  ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆ ಪತ್ತೆಹಚ್ಚಿ, 28.6 ಲಕ್ಷ ರೂ.ದಂಡ ವಿಧಿಸಿದೆ. ಹಲವಾರು ಜನ ಬಿಪಿಎಲ್ ಪಡಿತರ ಚೀಟಿಯನ್ನು ಎಪಿಎಲ್ ಗೆ ಸ್ವಯಂಪ್ರೇರಿತರಾಗಿ ಬದಲಾಯಿಸಿಕೊಂಡಿದ್ದಾರೆ.

ಅನರ್ಹರಾದರೂ ಬಿಪಿಎಲ್ ಪಡಿತರ ಚೀಟಿ ಹೊಂದಿರುವವರಿಗೆ ಎಪಿಎಲ್ ಗೆ ಪರಿವರ್ತಿಸಿಕೊಳ್ಳಲು ಸರಕಾರ ಸೆ.30ರ ತನಕ ಅವಧಿ ನೀಡಿತ್ತು. ಆಗಸ್ಟ್, ಸೆಪ್ಟೆಂಬರ್ ನಲ್ಲಿ ಕೆಲವರು ದಂಡ ರಹಿತವಾಗಿ ಎಪಿಎಲ್ ಗೆ ಬದಲಾಯಿಸಿದ್ದರಾದರೂ, ಸಾಕಷ್ಟು ಮಂದಿ ಬಿಪಿಎಲ್ ನಲ್ಲೇ ಮುಂದುವರಿದಿದ್ದರು. ಪರಿವರ್ತನೆಗೆ ಸರಕಾರ ನೀಡಿದ ಅವಧಿಯ ಬಳಿಕ ಪರಿವರ್ತನೆ ಮಾಡಿಕೊಳ್ಳುವ ಕುಟುಂಬಗಳಿಗೆ ಸರಕಾರದ ನಿಯಮದಂತೆ ದಂಡ ವಿಧಿಸಿ ಎಪಿಎಲ್ ಗೆ ಬದಲಾಯಿಸಿಕೊಳ್ಳಲು ಅವಕಾಶ ನೀಡಲಾಗುತ್ತಿದೆ.

Also Read  ರಾಜ್ಯದಲ್ಲಿ ಮತ್ತೆ ಓಡಾಡಲಿವೆ ಡಬಲ್ ಡೆಕ್ಕರ್ ಬಸ್.!

error: Content is protected !!
Scroll to Top