ಕಡಬದಲ್ಲಿ ಪೂರ್ಣ ಪ್ರಮಾಣದ ಎಪಿಎಮ್‌ಸಿ ಸ್ಥಾಪನೆ

(ನ್ಯೂಸ್ ಕಡಬ) newskadaba.com ಕಡಬ, ನ.6  ಕಡಬ ಈಗಾಗಲೇ ತಾಲೂಕು ಆಗಿರುವುದರಿಂದ ಸರಕಾರಿ ಇಲಾಖೆಗಳು ಹಂತ-ಹಂತವಾಗಿ ಕಾರ್ಯರಂಭ ಮಾಡಲು ಪ್ರಾರಂಭವಾಗಿದೆ. ಈ ಹಿನ್ನೆಲೆಯಲ್ಲಿ ಕಡಬದಲ್ಲಿ ಎಪಿಎಮ್‌ಸಿ ಕಚೇರಿ ಕಾರ್ಯರಂಭ ಪ್ರಾರಂಭಿಸಲಾಗುವುದು ಹಾಗೂ ಕಡಬಕ್ಕೆ ಪ್ರತ್ಯೇಕ ಎಪಿಎಮ್‌ಸಿ ಅನುಷ್ಠಾನಕ್ಕೆ ಸರಕಾರದ ಮಟ್ಟದಲ್ಲಿ ಪ್ರಯತ್ನಿಸಲಾಗುತ್ತಿದೆ ಎಂದು ಪುತ್ತೂರು ಎಪಿಎಮ್‌ಸಿ ಅಧ್ಯಕ್ಷ ದಿನೇಶ್ ಮೆದು ಹೇಳಿದರು.


ಅವರು ಮಂಗಳವಾರ ಕಡಬದಲ್ಲಿರುವ ಎಪಿಎಮ್‌ಸಿ ಉಪಮಾರುಕಟ್ಟೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿ ಮಾತನಾಡಿದರು. ಕಡಬ ಈಗಾಗಲೇ ಎಲ್ಲಾ ರೀತಿಯಿಂದಲೂ ಬೆಳೆಯುತ್ತಿರುವ ಕೇಂದ್ರವಾಗುತ್ತಿವೆ. ಸರಕಾರಿ ಇಲಾಖೆಗಳನ್ನು ಒಂದೊಂದಾಗಿ ಅನುಷ್ಠಾನಗೊಳ್ಳುತ್ತಿದೆ ಈ ಹಿನ್ನೆಲೆಯಲ್ಲಿ ಈ ಭಾಗದ ರೈತರ ಅನುಕೂಲಕ್ಕಾಗಿ ಪ್ರಸುತ್ತ ಇಲ್ಲಿರುವ ಎಪಿಎಮ್‌ಸಿ ಕಟ್ಟಡದಲ್ಲಿ ಕಚೇರಿಯನ್ನು ಪ್ರಾರಂಭಿಸಲು ನಿರ್ಧರಿಸಲಾಗಿದೆ. ಅಲ್ಲದೆ ಎಪಿಎಮ್‌ಸಿ ಪ್ರಾಂಗಣವನ್ನು ವಿಸ್ತರಣೆ ಮಾಡಲು ಚಿಂತಿಸಲಾಗುತ್ತಿದೆ ಇಲ್ಲಿ ಕೇವಲ 56ಸೆನ್ಸ್ ಜಾಗ ಮಾತ್ರ ಎಪಿಎಮ್‌ಸಿಗೆ ಲಭ್ಯವಿದೆ. ಇದಕ್ಕೆ ಅನುಕೂಲವಾಗುವಂತೆ ಬೇಕಾದಷ್ಟು ಜಾಗವನ್ನು ಖರೀದಿ ಅಥವಾ ಸರಕಾರದಿಂದ ಪಡೆದುಕೊಳ್ಳುವುದಕ್ಕಾಗಿ ಕಾರ್ಯಚಟುವಟಿಕೆಯನ್ನು ಪ್ರಾರಂಭಿಸಿದ್ದು ವಿಸ್ತಾರವಾದ ಸಂತೆ ಮಾರುಕಟ್ಟೆ ನಿರ್ಮಾಣಕ್ಕೆ ಕ್ರಮ ಕೈಗೊಳ್ಳಲಾಗುವುದು.

Also Read  ಪುತ್ತೂರು: ಅತ್ಯುತ್ತಮ ದಿಗ್ವಿಜಯ ವರದಿಗಾರ ಅಶೋಕ್‍ಗೆ ರಾಷ್ಟ್ರೀಯ ಟೆಲಿವಿಷನ್ ಅವಾರ್ಡ್

ಜಮೀನು ಖರೀದಿಗೆ ನಮ್ಮಲ್ಲಿ ಅವಕಾಶವಿದೆ ಆದರೆ ನಮ್ಮಲ್ಲಿರುವ 7.30 ಕೋಟಿ ರೂ ಎಲ್ಲವನ್ನು ಖರ್ಚು ಮಾಡಲು ಬರುವುದಿಲ್ಲ ಈಗಾಗಲೇ ಪುತ್ತೂರಿನಲ್ಲಿ ರೈಲ್ವೆ ಅಂಡರ್‌ಪಾಸ್‌ನ ಕೆಲಸ ಕಾರ್ಯಕ್ಕೆ ಅನುದಾನವನ್ನು ಬಳಸಿಕೊಳ್ಳಲು ಮುಖ್ಯಮಂತ್ರಿಗಳ ಒಪ್ಪಿಗೆ ಪಡೆಯಲಾಗುವುದು. ಕಡಬದ ಉಪ ಪ್ರಾಂಗಣದ ಶುಚಿತ್ವ ದೃಷ್ಠಿಯಿಂದ ಸ್ವಚ್ಚತೆಗಾಗಿ ಎಪಿಎಮ್‌ಸಿಯಿಂದ 10ಸಾವಿರ ರೂ. ಖರ್ಚು ಮಾಡಲಾಗುವುದು, ಪ್ರಥಮ ಹಂತವಾಗಿ ಸ್ವಚ್ಚತಾ ಕಾರ್ಯವನ್ನು ಎಪಿಎಮ್‌ಸಿ ನೆರವೇರಿಸಿದರೆ ಬಳಿಕ ಇಲ್ಲಿನ ಎಪಿಎಮ್‌ಸಿ ಕಟ್ಟಡದಲ್ಲಿರುವ ಹೋಟೇಲ್ ಹಾಗೂ ಅಂಗಡಿ ಮಾಲಕರು ಶುಚಿತ್ವವನ್ನು ಕಾಪಾಡಿಕೊಂಡು ಬರಬೇಕು, ಭವಿಷ್ಯದ ದೃಷ್ಠಿಯಿಂದ ಪ್ರಾಂಗಣದ ಸ್ವಚ್ಚತೆ ಹಾಗೂ ಭದ್ರತೆಯ ದೃಷ್ಠಿಯಿಂದ ಇಲ್ಲಿ ಸುತ್ತ ಬೇಲಿ ನಿರ್ಮಾಣ ಮಾಡಲಾಗುವುದು ಆ ಮೂಲಕ ಪ್ರಾಂಗಣದ ಒಳಗಡೆ ಅಲೆಮಾರಿಗಳು ಜೀವನ ಮಾಡುವುದು ಮತ್ತು ಪ್ರಾಣಿಗಳು ಬೀಡು ಬೀಡುವುದನ್ನು ತಪ್ಪಿಸಲಾಗುವುದು ಎಂದು ಹೇಳಿದ ದಿನೇಶ್ ಮೆದು ಕಡಬದಲ್ಲಿ ಸ್ವತಂತ್ರ್ಯ ಎಪಿಎಮ್‌ಸಿ ಅನುಷ್ಠಾನ ಮಾಡಲು ಸರಕಾರದ ಮಟ್ಟದಲ್ಲಿ ಪ್ರಯತ್ನಿಸಲಾಗುತ್ತಿದೆ ಅದಕ್ಕೂ ಮುನ್ನ ಇಲ್ಲಿ ಸೂಕ್ತ ವ್ಯವಸ್ಥೆಯನ್ನು ಮಾಡುವ ದೃಷ್ಠಿಯಿಂದ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು. ಎಪಿಎಮ್‌ಸಿ ನಿರ್ದೇಶಕರಾದ ಪುಲಸ್ತ್ಯಾ ರೈ , ಮೇದಪ್ಪ ಗೌಡ ಡೆಪ್ಪುಣಿ, ಮಾಜಿ ನಿರ್ದೇಶಕ ನಾರಾಯಣ ಪೂಜಾರಿ ಪೂರಕ ಮಾಹಿತಿ ನೀಡಿದರು. ಬಿಜೆಪಿ ಮುಖಂಡ ಕೇಶವ ಬೇರಿಕೆ ಉಪಸ್ಥಿತರಿದ್ದರು. ಬಳಿಕ ಅಧ್ಯಕ್ಷರು ಹೋಟೆಲ್ ಹಾಗೂ ಅಂಗಡಿ ಮಾಲಕರನ್ನು ಕರೆದು ಸ್ವಚ್ಚತೆಯನ್ನು ಕಾಪಾಡುವಂತೆ ಸೂಚಿಸಿದರು.

Also Read  ಕಡಬ ಪೊಲೀಸ್ ಠಾಣೆಯಲ್ಲಿ ಗಣೇಶೋತ್ಸವ ಸಮಿತಿಗಳ ಪ್ರಮುಖರ ಸಭೆ ► ಕಾನೂನಿನ ಚೌಕಟ್ಟಿನೊಳಗೆ ಹಬ್ಬ ಆಚರಿಸಿ: ಪಿಎಸ್‍ಐ ಪ್ರಕಾಶ್ ದೇವಾಡಿಗ

error: Content is protected !!
Scroll to Top