ಕಳಾರದಲ್ಲಿ ಸುಸಜ್ಜಿತ ಅಂಗನವಾಡಿ ಕಟ್ಟಡಕ್ಕೆ ಶಂಕುಸ್ಥಾಪನೆ ➤10 ಲಕ್ಷ ರೂ. ಅನುದಾನ

(ನ್ಯೂಸ್ ಕಡಬ) newskadaba.com ಕಡಬ, ನ.5    ಕಳಾರದ ಅಂಗನವಾಡಿ ಕೇಂದ್ರದ 10ಲಕ್ಷ ಅನುದಾನದಲ್ಲಿ ನೂತನ ಕಟ್ಟಡಕ್ಕೆ ನ. 4ರಂದು ಶಂಕುಸ್ಥಾಪನೆ ನೆರವೇರಿಸಲಾಯಿತು.

ಕಳೆದ 30ವರ್ಷಗಳಿಂದ ಹಳೆಯ ಕಟ್ಟಡದಲ್ಲಿ ನಡೆಸುತ್ತಿದ್ದ ಕಳಾರ ಅಂಗನವಾಡಿ ಕಟ್ಟಡಕ್ಕೆ ಎಂಆರ್‌ಪಿಎಲ್ ಕಂಪೆನಿಯಿಂದ 5ಲಕ್ಷ ರೂ.ಹಾಗೂ ಕಡಬ ಗ್ರಾ.ಪಂನ ಎನ್‌ಆರ್‌ಇಜಿಯಿಂದ 5ಲಕ್ಷ ರೂ ಒಟ್ಟು 10ಲಕ್ಷ ಅನುದಾನದಲ್ಲಿ ಸುಸಜ್ಜಿತ ಕಟ್ಟಡ ಕಟ್ಟಲಾಗುತ್ತಿದ್ದು ಗುದ್ದಲಿ ಪೂಜೆ ನೆರವೇರಿಸುವ ಮೂಲಕ ಚಾಲನೆ ನೀಡಿದ ಜಿ.ಪಂ ಸದಸ್ಯ ಪಿ.ಪಿ ವರ್ಗೀಸ್‌ರವರು ಅತೀ ಶೀಘ್ರದಲ್ಲಿ ಉತ್ತಮ ಕಟ್ಟಡ ನಿರ್ಮಾಣವಾಗುವುದರೊಂದಿಗೆ ಈ ಭಾಗದ ಪುಟಾಣಿಗಳ ಭವಿಷ್ಯ ಉಜ್ವಲವಾಗಲೆಂದು ಹಾರೈಸಿದರು.

ಕಡಬ ಗ್ರಾ.ಪಂ ಮಾಜಿ ಅಧ್ಯಕ್ಷ ಹಾಲಿ ಸದಸ್ಯ ಹನೀಫ್ ಕೆ.ಎಂ ಪ್ರಾಸ್ತಾವಿಕವಾಗಿ ಮಾತನಾಡಿ ಕಡಬ ಅಂಗನವಾಡಿಯಲ್ಲಿ ಈ ಹಿಂದೆ ಮಂಡಲ ಪಂಚಾಯತ್ ವತಿಯಿಂದ ನಿರ್ಮಿಸಲಾದ ಚಿಕ್ಕ ಕಟ್ಟಡವೊಂದರಲ್ಲಿ ಅಂಗನವಾಡಿ ನಡೆಸುತ್ತಿದ್ದು ಸುಮಾರು 40ಕ್ಕೂ ಮೇಲ್ಪಟ್ಟು ಪುಟಾಣಿಗಳು ಇಲ್ಲಿ ಶಾಲಾ ಪೂರ್ವ ಶಿಕ್ಷಣ ಪಡೆಯುತ್ತಿದ್ದು 30 ವರ್ಷ ಹಳೆಯದಾದ ಕಟ್ಟಡ ಈಗ ಶಿಥಿಲಗೊಂಡ ಕಾರಣ ಈ ಹಿಂದೆ ಹಲವಾರು ಭಾರಿ ಸರಕಾರಕ್ಕೆ, ಹಾಗೂ ಸಂಬಂಧಪಟ್ಟ ಇಲಾಖೆಗೆ ಮನವಿ ಸಲ್ಲಿಸಿದ್ದರೂ ಯಾವುದೇ ಪ್ರಗತಿ ಕಂಡಿರಲಿಲ್ಲ. ಆದರೆ ಈ ಭಾರಿ ಈ ಭಾಗದ ಜನರ ಕನಸು ನನಸಾಗುವ ಮೂಲಕ ಕಳಾರಕ್ಕೆ ಸುಸಜ್ಜಿತ ಅಂಗನವಾಡಿ ಕಟ್ಟಡ ನಿರ್ಮಾಣವಾಗುತ್ತಿರುವುದು ನಮ್ಮೆಲ್ಲರ ಸೌಭಾಗ್ಯವಾಗಿದ್ದು ಕಟ್ಡಡದ ಮಂಜೂರಾತಿಗೆ ಸಹಕರಿಸಿದ ಜಿ.ಪಂ, ತಾ.ಪಂ, ಸದಸ್ಯರುಗಳು ಎಸ್‌ಡಿಎಮ್‌ಸಿ ಸಮಿತಿ, ನಾಗರೀಕರಿಗೆ ಹಾಗೂ ಇಲಾಖಾ ಅಧಿಕಾರಿಗಳಿಗೆ ಕೃತಜ್ಞತೆಯನ್ನು  ಸಲ್ಲಿಸಿದರು.

Also Read  ಒಂದು ತಿಂಗಳೊಳಗೆ ಬಸ್‌ ಗಳಿಗೆ ಬಾಗಿಲು ಅಳವಡಿಸುವಂತೆ ಡಿಸಿ ಸೂಚನೆ

error: Content is protected !!
Scroll to Top