ಬಸ್ಸುಗಳೆರಡು ಡಿಕ್ಕಿ ಆಶ್ಚರ್ಯಗೊಂಡ ಪ್ರಯಾಣಿಕರು

(ನ್ಯೂಸ್ ಕಡಬ) newskadaba.com ಕಡಬ, ನ.5    ಕೆಎಸ್‌ಆರ್‌ಟಿಸಿ ಬಸ್ಸು ತಂಗುದಾಣದಲ್ಲಿ ಏಕಾಏಕಿ 2 ಕೆಎಸ್‌ಆರ್‌ಟಿಸಿ ಬಸ್ಸುಗಳ ಡಿಕ್ಕಿಯಿಂದ ಡಮಾರ್ ಎಂಬ ಶಬ್ಧಕ್ಕೆ ಪೇಟೆಯಾದ್ಯಂತ ಸಾರ್ವಜನಿಕರು ಓಡಿ ಬಂದು ಅಚ್ಚರಿಪಟ್ಟ ಘಟನೆ ನ.4ರಂದು ಕಡಬ ಬಸ್ಸು ತಂಗುದಾಣದಲ್ಲಿ ನಡೆಯಿತು.

ಕಡಬ -ಉಪ್ಪಿನಂಗಡಿ ಕೆಎಸ್‌ಆರ್‌ಟಿಸಿ ಬಸ್ಸು ಸ್ಯಾಂಡಿನಲ್ಲಿ ನಿಂತಿದ್ದು ಏಕಾಏಕಿ ಮಂಗಳೂರು ಎಕ್ಸ್ ಪ್ರೆಸ್ ಬಸ್ಸ್ ಹಿಂದಿನಿಂದ ಡಿಕ್ಕಿಯಾಗಿ ಭಯಾನಕ ಶಬ್ಧ ಕೇಳಿಸಿದ್ದರೂ ಯಾವುದೇ ಅಪಾಯವಿಲ್ಲದೆ ಪ್ರಯಾಣಿಕರು ಪಾರಾಗುವುದರೊಂದಿಗೆ ದೊಡ್ಡ ಪ್ರಮಾಣದ ಅಪಾಯವೊಂದು ತಪ್ಪಿದಂತಾಗಿದೆ.

ಸ್ಥಳದಲ್ಲಿದ್ದ ಕಡಬ ಪೋಲೀಸ್ ಠಾಣೆಯ ಗೃಹರಕ್ಷಕ ದಳದ ಸಿಬ್ಬಂದಿಗಳಾದ ರೂಪ ಮತ್ತು ಪ್ರಮೀತ ಕೂಡಲೇ ಸ್ಪಂದಿಸಿ ಶಾಲಾ ಬಿಟ್ಟ ಸಮಯವಾದುದರಿಂದ ವಿದ್ಯಾರ್ಥಿಗಳನ್ನೂ, ಸಾರ್ವಜನಿಕರನ್ನೂ ಚದುರಿಸಿ ಯಾವುದೇ ಅನಾಹುತ ನಡೆಯದಂತೆ ಸೂಕ್ತ ಎಚ್ಚರಿಕೆ ವಹಿಸಿದ್ದು ಜನರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

Also Read  ಉಡುಪಿ : ಕೃಷ್ಣಾ ಮಠದ ಪೂರ್ವಭಾವಿ ಬಾಳೆ ಮುಹೂರ್ತ ಸಂಭ್ರಮ

error: Content is protected !!
Scroll to Top