ಹೊಸ ತುಳು ಸಿನಿಮಾ “ಜಬರದಸ್ತ್ ಶಂಕರ” ಬಿಡುಗಡೆ

(ನ್ಯೂಸ್ ಕಡಬ) newskadaba.com ಮಂಗಳೂರು, ನ.4  ತುಳು ಚಿತ್ರರಂಗ ಬಹುನಿರೀಕ್ಷೆಯಿಂದ ಕಾಯುತ್ತಿರುವ “ಜಬರದಸ್ತ್ ಶಂಕರ” ಹೊಸ ತುಳು ಸಿನಿಮಾ ನವೆಂಬರ್ 8 ರಂದು ಬಿಡುಗಡೆಯಾಗಲಿದೆ.


ಪ್ರೇಕ್ಷಕರಲ್ಲಿ ಕುತೂಹಲ ಕೆರಳಿಸಿರುವ “ಜಬರದಸ್ತ್ ಶಂಕರ” ತುಳು ಸಿನಿಮಾ ದಿನಾಂಕವನ್ನು ಚಿತ್ರದ ನಿರ್ದೇಶಕರಾಗಿರುವ ತೆಲಿಕೆದ ಬೊಳ್ಳಿ ದೇವದಾಸ್ ಕಾಪಿಕಾಡ್ ಅವರು ಪ್ರಕಟಿಸಿದ್ದಾರೆ. ಜಲನಿಧಿ ಫಿಲ್ಸ್ ಬ್ಯಾನರಿನಲ್ಲಿ ಇದೇ ಮೊದಲ ಬಾರಿಗೆ ಅನಿಲ್ ಕುಮಾರ್ ಮತ್ತು ಲೊಕೇಶ್ ಕೋಟ್ಯಾನ್ ಚಿತ್ರ ನಿರ್ಮಾಪಕರಾಗುತ್ತಿದ್ದು, ಸಂಗೀತ  ನಿರ್ದೇಶಕ ಕದ್ರಿ ಮಣಿಕಾಂತ್ ಚಿತ್ರಕ್ಕೆ ಸಂಗೀತ ನೀಡಿದ್ದಾರೆ.

ತುಳು ಚಿತ್ರರಂಗ ಬೆಳೆಯಲಿ ಎಂದು “ಜಬರದಸ್ತ್ ಶಂಕರ” ಟೀಸರ್ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದ ಕಿಚ್ಚ ಸುದೀಪ್ ಟ್ವೀಟ್ ಮಾಡಿದ್ದಾರೆ. ಅರ್ಜುನ್ ಕಾಪಿಕಾಡ್ ನಾಯಕ ನಟನಾಗಿರುವ “ಜಬರದಸ್ತ್ ಶಂಕರ” ಪ್ರೇಕ್ಷಕರಲ್ಲಿ ಕುತೂಹಲ ಸೃಷ್ಟಿಸಿದೆ. ಸಾಮಾನ್ಯವಾಗಿ ತುಳು ಚಿತ್ರಗಳಲ್ಲಿ ಹಾಸ್ಯವೇ ಪ್ರಧಾನ ಆಗಿರುತ್ತದೆ. ದೇವದಾಸ್ ಕಾಪಿಕಾಡ್ ಅವರೇ ಕತೆ, ಚಿತ್ರಕತೆ, ಸಂಭಾಷಣೆ, ಹಾಡುಗಳನ್ನು ಬರೆದು ಚಿತ್ರ ನಿರ್ದೇ ಶನ ಮಾಡಿರುವಾಗ ಹಾಸ್ಯ ಇದ್ದೇ ಇರುತ್ತದೆ.ಆದರೆ, “ಜಬರದಸ್ತ್ ಶಂಕರ” ಕೇವಲ ಹಾಸ್ಯ ಚಿತ್ರವಾಗಿರದೆ ತುಳು ಚಿತ್ರರಂಗಕ್ಕೆ ಹೊಸ ಆಯಾಮ ನೀಡುವ ಮಹತ್ತರವಾದ ಪ್ರಯತ್ನವನ್ನು ಕಾಪಿಕಾಡ್ ನಡೆಸಿದ್ದಾರೆ.

Also Read  ಕ್ವಾರಂಟೈನ್‍ನಿಂದ ಮನೆಗೆ ಹಿಂತಿರುಗಿ ಬಂದವನಿಗೆ ಮತ್ತೆ ಶಾಕ್..!!! ➤  ತಡವಾಗಿ ಬಂದ ವರದಿಯಲ್ಲಿ ಪಾಸಿಟೀವ್ ಕೇಸ್


ದೇವದಾಸ್ ಕಾಪಿಕಾಡ್ ಅವರು ನಟಿಸಿ ನಿರ್ದೇಶಿಸಿರುವ ಈ ಸಿನಿಮಾ ತುಳು ಚಿತ್ರರಂಗದ ಮಟ್ಟಿಗೆ ವಿನೂತನ ಶೈಲಿಯಲ್ಲಿ ಮೂಡಿಬಂದಿದೆ. ತುಳು ಸಿನಿಮಾವನ್ನು ಚಿತ್ರರಂಗಕ್ಕೆ ಅರ್ಪಿಸಲಿದ್ದಾರೆ ಮಾಸ್ ಮಾದ ತಂಡ ವಿನ್ಯಾಸಗೊಳಿಸಿದ ಸ್ಟಂಟ್ ದೃಶ್ಯಗಳು ಚಿತ್ರದ ಮತ್ತೊಂದು ಪ್ರಮುಖ ಆಕರ್ಷಣೆಯಾಗಿದೆ. ತುಳು ಚಿತ್ರರಂಗಕ್ಕೆ ಹೊಸದಾದ ಫೈಟ್ ದೃಶ್ಯಗಳನ್ನು “ಜಬರದಸ್ತ್ ಶಂಕರ” ನಿಗಾಗಿ ಅಳವಡಿಸಲಾಗಿದೆ.

Also Read  ಉಪ್ಪಿನಂಗಡಿ: ಸೈಂಟ್ ಮೇರಿಸ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಕಳ್ಳತನ

error: Content is protected !!
Scroll to Top