ಮಾನವೀಯತೆ ಮೆರೆದ ಪೊಲೀಸ್ ಕಾನ್‌ಸ್ಟೇಬಲ್

(ನ್ಯೂಸ್ ಕಡಬ) newskadaba.com ಕಡಬ, ನ.4  ತನ್ನ ಮದುವೆ ದಿನ ಬಡವನ ಮನೆ ನಿರ್ಮಾಣಕ್ಕೆ ಸಹಾಯಧನ ವಿತರಿಸಿ ಪೊಲೀಸ್ ಕಾನ್‌ಸ್ಟೇಬಲ್ ಓರ್ವರು ಮಾನವೀಯತೆ ಮೆರೆದಿದ್ದಾರೆ.


ಪುತ್ತೂರು ಸಂಚಾರಿ ಠಾಣೆಯಲ್ಲಿ ಕಾನ್‌ಸ್ಟೇಬಲ್ ಆಗಿರುವ ರಾಮಕುಂಜ ಗ್ರಾಮದ ರಾಮಕುಂಜ ನಿವಾಸಿ ಚೆನ್ನಪ್ಪ ಮೂಲ್ಯರ ಪುತ್ರ ರೋಹಿತ್ ಮತ್ತು ಅಮಿತಾ ಅವರ ಮದುವೆ ಸಮಾರಂಭ ಉಪ್ಪಿನಂಗಡಿ ಶಕ್ತಿ ಸಭಾಭವನದಲ್ಲಿ ಭಾನುವಾರ ನಡೆದಿತ್ತು. ಈ ಸಮಾರಂಭದಲ್ಲಿ ದಂಪತಿಗಳು ಮದುವೆ ಮಂಟಪದಲ್ಲಿ ಕಡಬ ತಾಲೂಕು ಕೇನ್ಯ ಗ್ರಾಮದ ಕಣ್ಣು ಕಾಣಿಸಿದ ತೀರಾ ಬಡತನದಲ್ಲಿರುವ ಲಿಂಗು ಎಂಬವರ ಮನೆ ನಿರ್ಮಾಣಕ್ಕೆ ಧನ ಸಹಾಯ ನೀಡಿದರು.

Also Read  ನಮ್ಮ ತುಳುನಾಡ್ ನಮ್ಮ ಹೆಮ್ಮೆ ➤ ಮುಕಾಂಬಿ_ಗುಳಿಗ


ಯುವ ಬ್ರಿಗ್ರೇಡ್ ಮುಂದಾಳತ್ವದಲ್ಲಿ ನಿರ್ಮಾಣ ಮಾಡುತ್ತಿರುವ ಈ ಮನೆಗೆ ಧನ ಸಹಾಯವಲ್ಲದೆ, ಛಾವಣಿಗೆ ಹೆಂಚು ನೀಡುವ ಭರವಸೆಯನ್ನು ನೀಡಿ ತಮ್ಮ ಮದುವೆ ದಿನವನ್ನು ಅವಿಸ್ಮರಣೀಯಗೊಳಿಸಿದರು. ಧನ ಸಹಾಯ ಹಸ್ತಾಂತರ ಸಂದರ್ಭದಲ್ಲಿ ಯುವ ಬ್ರಿಗ್ರೇಡ್ ಮುಖಂಡರು ಹಾಗೂ ರೋಹಿತ್ ಸಂಬಂಧಿಕರು ಉಪಸ್ಥಿತರಿದ್ದರು.

error: Content is protected !!
Scroll to Top