ಸ್ಕೂಲ್ ಬಸ್ ಮತ್ತು ಸ್ಕೂಟರ್ ನಡುವೆ ಡಿಕ್ಕಿ

(ನ್ಯೂಸ್ ಕಡಬ) newskadaba.com ಬೆಳ್ಳಾರೆ, ನ.2  ಸ್ಕೂಟರ್ ಮತ್ತು ಸ್ಕೂಲ್ ಬಸ್ ನಡುವೆ ಡಿಕ್ಕಿಯಾದ ಪರಿಣಾಮ ಸವಾರಿಗೆ ಗಾಯಗೊಂಡ ಘಟನೆ ಶುಕ್ರವಾರದಂದು ಸುಳ್ಯ ತಾಲೂಕು ಕಳಂಜ ಗ್ರಾಮದ ಪಂಜಿಗಾರು ಎಂಬಲ್ಲಿ ನಡೆದಿದೆ.

ಶ್ರೀಮತಿ ಶೈನಿಯು ಸ್ಕೂಟರಿನ ಇಂಡಿಕೇಟರ್ ಹಾಕಿ ಕೈಯಲ್ಲಿ ಸೂಚನೆ ನೀಡಿ ರಸ್ತೆಯ ಬಲಕ್ಕೆ ತಿರುಗಿಸಿದಾಗ, ಹಿಂಬದಿಯಿಂದ ಬಂದ ಸ್ಕೂಲ್ ಬಸ್ಸೊಂದು ಸ್ಕೂಟರಿಗೆ ಡಿಕ್ಕಿ ಹೊಡೆದ ಪರಿಣಾಮ ಸವಾರಿಯ ತಲೆಯ ಎಡಭಾಗಕ್ಕೆ, ಎಡಮೊಣಕೈಗೆ, ಮತ್ತು ಬಲಮೊಣಕೈಗೆ ಗಾಯಗಳಾಗಿ ಚಿಕಿತ್ಸೆಯ ಬಗ್ಗೆ ಪುತ್ತೂರಿನ ಸಿಟಿ ಆಸ್ಪತ್ರೆಯಲ್ಲಿ ಸೇರಿಸಿರುವುದಾಗಿ ಬೆಳ್ಳಾರೆ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

Also Read  ಥಲಸ್ಸೆಮಿಯಾ ಕಾಯಿಲೆಯಿಂದ ಬಳಲುತ್ತಿರುವ ಮಕ್ಕಳಿಗಾಗಿ ರಕ್ತದಾನ ಮಾಡಿದ ಸಂಸದೆ ಶೋಭಾ ಕರಂದ್ಲಾಜೆ

error: Content is protected !!
Scroll to Top