ಬೆಳ್ಳಾರೆ (ನ್ಯೂಸ್ ಕಡಬ ನ.1) :ಮುಹಿಯುದ್ದೀನ್ ಜುಮಾ ಮಸೀದಿ ಅತ್ತಿಕರ ಮಜಲು ಅಧೀನ ದಲ್ಲಿ ಕಾರ್ಯಾಚರಿಸುತ್ತಿರುವ ಮಿನ್ನತುಲ್ ಹುದಾ ಪಂಚವಾರ್ಷಿಕ ಪ್ರಯುಕ್ತ ನವಂಬರ್ 18 ಹಾಗೂ 19 ರಂದು ಪ್ರಸಿದ್ಧ ವಾಗ್ಮಿ ವಲಿಯುದ್ದೀನ್ ಫೈಝಿ ಯವರು ಮಯ್ಯತ್ ಪರಿಪಾಲನ ಕುರಿತು ಪ್ರಭಾಷಣ ನಡೆಸಲಿರುವರು.
ಎರಡು ದಿವಸಗಳ ಕಾಲ ನಡೆಯುವ ದ್ವಿದಿನ ಪ್ರಭಾಷಣದ ಪ್ರಚಾರಾರ್ಥ ಆಮಂತ್ರಣ ಪತ್ರಿಕೆಯ ಬಿಡುಗಡೆ ಕಾರ್ಯಕ್ರಮ ನವಂಬರ್ 1 ರಂದು ಜುಮಾ ನಮಾಝಿನ ಬಳಿಕ ನಡೆಯಿತು.
ಮಸೀದಿ ಖತೀಬ ಯಾಸರ್ ಅರಫಾತ್ ಕೌಸರಿ ಮಸೀದಿ ಅಧ್ಯಕ್ಷ ಹಾಜಿ ಪಿ ಇಸಾಕ್ ಸಾಹೇಬ್ ಪಾಜಪಳ್ಳ ಇವರಿಗೆ ವಿತರಿಸುವ ಮೂಲಕ ಬಿಡುಗಡೆ ಗೊಳಿಸಿದರು.
ಬಿಡುಗಡೆ ಗೊಳಿಸಿ ಮಾತನಾಡಿ ,ಮಯ್ಯತ್ ಕುರಿತು ಇಂದು ಪ್ರತಿಯೊಬ್ಬನೂ ಅರಿಯಲೇಬೇಕಾದಂತಹ ಪ್ರಭಾಷಣವಾಗಿದೆ.ಈ ಕಮಿಟಿ ಯು ಈ ಹಿಂದೆ ಹಲವಾರು ಕಾರ್ಯ ಗಳನ್ನ ಯಶಸ್ವಿಯಾಗಿ ಮುನ್ನೆಡೆಸುತ್ತಾ ಬಂದಿದ್ದು ಅದರಂತೆ ಈ ದ್ವಿದಿನ ಕಾರ್ಯಕ್ರಮ ವನ್ನ ಸಂಘಟಿಸಿರುತ್ತಾರೆ .ಪ್ರಸಿದ್ಧ ವಾಗ್ಮಿ ಉಸ್ತಾದರು ಕೇರಳದಾದ್ಯಂತ ಪ್ರಸಿದ್ಧಿ ಪಡೆದಂತಹ ಪ್ರಭಾಷಣಗಾರರು ಆಗಿರುತ್ತಾರೆ ಇವರು ಈ ನಾಡಿಗೆ ಬರುವುದೆಂದರೆ ಅಭಿಮಾನವಾಗಿದೆ ,ಆದುದರಿಂದ ಪ್ರತಿಯೊಬ್ಬ ಜಮಾಅತರು ಕಾರ್ಯ ಕ್ರಮ ಸಂಘಟಕರು ಪ್ರಚಾರ ಕಾರ್ಯ ದಲ್ಲಿ ತೊಡಗಿ ಯಶಸ್ವಿಗೊಳಿಸುವಲ್ಲಿ ಪ್ರವೃತರಾಗಬೇಕೆಂದು ಕರೆನೀಡಿದರು.
ಜಮಾಅತ್ ಕಮಿಟಿ ಕೋಶಾಧಿಕಾರಿ ಇಸ್ಮಾಯಿಲ್ ನೀರ್ಪಂಜ , ಊರೂಸ್ ಕಮಿಟಿ ಅಧ್ಯಕ್ಷ ಇಬ್ರಾಹೀಂ ಅತ್ತಿಕರ ಮಜಲು , ಕಮಿಟಿ ಸದಸ್ಯ ಶರೀಫ್ ಪಂಜಿಗಾರು , ಮಿನ್ನತುಲ್ ಹುದಾ ಅಧ್ಯಕ್ಷ ಶರೀಫ್ ಪಿ ಎ , ಯುವ ವಾಗ್ಮಿ ಇಕ್ಬಾಲ್ ಬಾಳಿಲ , ಶರೀಫ್ ಭಾರತ್ ,ಅಶ್ರಫ್ ಅಗಲ್ಪಾಡಿ , ಸಯ್ಯದ್ ಅಹ್ಮದ್ ಅತ್ತಿಕರಮಜಲು ,ಜಮಾಅತರು ಉಪಸ್ಥಿತರಿದ್ದರು .
ಎರಡು ದಿವಸಗಳ ಕಾಲ ನಡೆಯುವ ಪ್ರಭಾಷಣವು ಎಲ್ ಇ ಡಿ ಸ್ಕ್ರೀನ್ ,ಕ್ಲಿಪ್ಪಿಂಗ್ ಮೂಲಕ ನಡೆಯಲಿರುವುದೆಂದು ಕಾರ್ಯಕ್ರಮ ಸಂಘಟಕರು ಪ್ರಕಟನೆಗೆ ತಿಳಿಸಿರುತ್ತಾರೆ.