ಬಿಸಿಯೂಟ ಮೆನು ಬದಲಾವಣೆಯ ಆದೇಶವನ್ನು ಮರುಪರಿಶೀಲಿಸುವಂತೆ ಮನವಿ

(ನ್ಯೂಸ್ ಕಡಬ) newskadaba.com ಕಲ್ಲುಗುಡ್ಡೆ,  ನ.1  ಸರಕಾರಿ ಶಾಲೆಗಳಲ್ಲಿನ ಬಿಸಿಯೂಟ ಮೆನು ಬದಲಾವಣೆಯ ಆದೇಶವನ್ನು ಮರುಪರಿಶೀಲಿಸುವಂತೆ ನೂಜಿಬಾಳ್ತಿಲ ತೆಗ್‍ರ್ ತುಳುಕೂಟ ಸಂಚಾಲಕ ಉಮೇಶ್ ಸಾಯಿರಾಮ್ ಅವರು ರಾಜ್ಯ ಶಿಕ್ಷಣ ಸಚಿವರಾದ ಸುರೇಶ್ ಕುಮಾರ್ ಅವರಿಗೆ ಮನವಿ ಮಾಡಿದ್ದಾರೆ.

ಸರಕಾರವು ನ.1 ರಿಂದ ಸರಕಾರಿ ಶಾಲೆಗಳ ಬಿಸಿಯೂಟದ ಮೆನು ಬದಲಾವಣೆಗೆ ಆದೇಶಿಸಿದ್ದು, ಈ ಆದೇಶವು ಇಡೀ ರಾಜ್ಯಕ್ಕೆ ಒಂದೇ ರೀತಿಯ ಆಹಾರ ಪದ್ಧತಿಯನ್ನು ಸೂಚಿಸುತ್ತದೆ. ಆದರೆ ಈ ಆಹಾರ ಪದ್ಧತಿಯು ಕೇವಲ ಕೆಲವೇ ಜಿಲ್ಲೆಗಳಿಗೆ ಅನ್ವಯವಾಗುತ್ತಿದೆ. ಈ ಆಹಾರ ಪದ್ಧತಿಯ ಮೆನುವನ್ನು ಆಯಾ ಜಿಲ್ಲೆಗಳ ಆಹಾರ ಪದ್ಧತಿಗೆ ಅನುಕೂಲವಾಗುವ ರೀತಿಯಲ್ಲಿ ಬದಲಾಯಿಸುವಂತೆ ಉಮೇಶ್ ಅವರು ಮನವಿಯಲ್ಲಿ ಸಚಿವರಿಗೆ ತಿಳಿಸಿದ್ದಾರೆ.

Also Read  ಕಡಬ : ನೂತನ ಸಂಸ್ಥೆ ಜೆ.ಎಸ್. ಸ್ಪೋರ್ಟ್ಸ್ & ಪ್ರಿಂಟ್ ಟೆಕ್ನಿಕ್ ಶುಭಾರಂಭ

error: Content is protected !!
Scroll to Top