ಕಳವು ನ್ಯೂಸ್

(ನ್ಯೂಸ್ ಕಡಬ) newskadaba.com  ಬಂಟ್ವಾಳ,  .31    ಮಗಳ ಹೆರಿಗೆ ಆರೈಕೆಗೆಂದು ಮನೆಗೆ ಬೀಗ ಹಾಕಿ ದೇರಳಕಟ್ಟೆ ಆಸ್ಪತ್ರೆಗೆ ಹೋದವರು ಆರೈಕೆಯ ನಂತರ ಮನೆಗೆ ಬಂದಾಗ ಸುಮಾರು 60,000 ಮೌಲ್ಯದ ಚಿನ್ನಾಭರಣಗಳು ಕಾಣೆಯಾದ ಘಟನೆ ಬಂಟ್ವಾಳ ತಾಲೂಕಿನ ತುಂಬೆ ಗ್ರಾಮದಲ್ಲಿ ನಡೆದಿದೆ.


ಮೋಹಿನಿಯವರು 03.10.2019 ರಂದು ಮನೆಯಿಂದ ತೆರಳಿದ್ದು, 30.10.2019 ರಂದು ಬಂದು ಬೀಗ ತೆಗೆದು ಒಳಗೆ ಹೋಗಿ ನೋಡಿದಾಗ ಹಿಂದಿನ ಬಾಗಿಲು ಸ್ವಲ್ಪ ತೆರೆದಿದ್ದು ನಂತರ ರೂಮಿನ ಒಳಗೆ ಬಂದು ನೋಡಿದಾಗ ಕಪಾಟು ತೆರೆದಿದ್ದು ಬಟ್ಟೆ ಬರೆ ಚೆಲ್ಲಾ ಪಿಲ್ಲಿಯಾಗಿ ಕಂಡುಬಂದು ಕಪಾಟಿನೊಳಗಿದ್ದ ಸುಮಾರು 14 ಗ್ರಾಂ ನೆಕ್ಲೇಸ್, ಸುಮಾರು 2 ಗ್ರಾಂ ಅಂದಾಜು ತೂಕದ 2 ಉಂಗುರ ಅಲ್ಲದೇ ಕಪಾಟಿನಲ್ಲಿಟ್ಟಿದ್ದ ರೂ 160/- ಕಳವಾಗಿದೆ ಎಂದು ಬಂಟ್ವಾಳ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Also Read  ಆಭರಣ ಉತ್ಪಾದನಾ ಘಟಕದಿಂದ ಕಳ್ಳತನ ➤ಆರೋಪಿಯ ಬಂಧನ

error: Content is protected !!
Scroll to Top