ಸಾಮೂಹಿಕ ಗೋಪೂಜೆ, ಧಾರ್ಮಿಕ ಸಭೆ, ದೀಪಾವಳಿ ಕ್ರೀಡೋತ್ಸವ ➤ಸಬಳೂರು, ಶ್ರೀ ರಾಮ ಗೆಳೆಯರ ಬಳಗ

(ನ್ಯೂಸ್ ಕಡಬ) newskadaba.com ಸಬಳೂರು, .29  ಶ್ರೀ ರಾಮ ಗೆಳೆಯರ ಬಳಗದ ವತಿಯಿಂದ ದೀಪಾವಳಿ ಕ್ರೀಡೋತ್ಸವ, ಸಾಮೂಹಿಕ ಗೋಪೂಜೆ ಹಾಗೂ ಧಾರ್ಮಿಕ ಸಭೆ ಸಬಳೂರು ಅಯೋಧ್ಯಾನಗರದ ಶ್ರೀ ರಾಮ ಭಜನಾ ಮಂದಿರ ವಠಾರದಲ್ಲಿ ಭಾನುವಾರದಂದು ನಡೆಯಿತು.


ತಾಲೂಕು ಪಂಚಾಯಿತಿ ಸದಸ್ಯೆ ಜಯಂತಿ ಆರ್ ಗೌಡ ಅಧ್ಯಕ್ಷತೆ ವಹಿಸಿದ್ದರು. ಅತಿಥಿಯಾಗಿ ಶ್ರೀ ರಾಮ ಭಜನಾ ಮಂದಿರದ ಅಧ್ಯಕ್ಷ ರಾಮಚಂದ್ರ ನಾಯ್ಕರಿದ್ದರು. ಶ್ರೀ ರಾಮ ಗೆಳೆಯರ ಬಳಗದ ಗೌರವಾಧ್ಯಕ್ಷ ಪ್ರವೀಣ್ ನೀಡೇಲು, ಅಧ್ಯಕ್ಷ ಗುರುಪ್ರಸಾದ್ ಪಟ್ಟೆದಮೂಲೆ ಉಪಸ್ಥಿತರಿದ್ದರು. ಸಾಮೂಹಿಕ ಗೋಪೂಜೆಯನ್ನು ಅರ್ಚಕ ವೆಂಕಟ್ರಮಣ ಕುದ್ರೆತ್ತಾಯ ನೆರವೇರಸಿದರು. ಕೊನೆಗೆ ಶಾಲಾ ವಿದ್ಯಾರ್ಥಿಗಳಿಗೆ ಮತ್ತು ಸಾರ್ವಜನಿಕರಿಗೆ ವಿವಿಧ ಸ್ಪರ್ಧೆ ನಡೆಯಿತು.

Also Read  ಮದ್ಯಪಾನ ಸ್ವಯಂ ಮಂಡಳಿ ಹೆಸರು ಬದಲಾವಣೆಗೆ ಪತ್ರ ➤ ಸಿಎಂಗೆ ಧರ್ಮಾಧಿಕಾರಿ ಡಿ ವೀರೇಂದ್ರ ಹೆಗ್ಗಡೆ ಮನವಿ

error: Content is protected !!
Scroll to Top