ವಿಟ್ಲದಲ್ಲಿ ಬೃಹತ್ ರಕ್ತದಾನ ಶಿಬಿರ ,ಆರ್ ಟಿ ಐ ಕಾರ್ಯ ಕರ್ತ ಮಾನವ ಹಕ್ಕು ಹೋರಾಟ ಗಾರ ಹನೀಫ್ ಸಾಹೇಬ್ ಪಾಜಪಳ್ಳರಿಗೆ ಸಮ್ಮಾನ ಕಾರ್ಯಕ್ರಮ

 

ವಿಟ್ಲ ( ನ್ಯೂಸ್ ಕಡಬ ಅ:29) ಅಲ್ ಅಮೀನ್ ಯೂತ್ ಫೆಡರೇಶನ್ ( ರಿ ) ಎ ವೈ ಎಫ್ ಕೊಡಂಗಾಯಿ ಚಾಂಪಿಯನ್ ಲೀಗ್ , ಇತ್ತಿಫಾಬುಲ್ ಚಿಲ್ಡ್ರನ್ಸ್ ಕಮಿಟಿ , ಮತ್ತು ಬ್ಲಡ್ ಡೋನರ್ಸ್ (ರಿ) ಮಂಗಳೂರು ಇದರ ಸಂಯುಕ್ತ ಆಶ್ರಯದಲ್ಲಿ ಹಾಗೂ ಭಾರತೀಯ ರೆಡ್ ಕ್ರಾಸ್ ಬ್ಲಡ್ ಬ್ಯಾಂಕ್ ಮಂಗಳೂರು ಇದರ ಸಹಕಾರ ದೊಂದಿಗೆ ಬೃಹತ್ ರಕ್ತದಾನ ಶಿಬಿರ ಹಾಗೂ ಸಮ್ಮಾನ ಕಾರ್ಯಕ್ರಮ ಅಕ್ಟೋಬರ್ 27 ರಂದು ನಡೆಯಿತು.

ಈ ಕಾರ್ಯ ಕ್ರಮವು ಮರ್ಹೂಮ್ ಎಂ ಕೆ ಉಮ್ಮರ್ ಫಾರೂಕ್ ಕೊಡಂಗಾಯಿ ಸ್ಮರಣಾರ್ಥ ವಾಗಿ ನಡೆದ ಕಾರ್ಯಕ್ರಮ ವಾಗಿತ್ತು . ಈ ಬೃಹತ್ ಸಮಾರಂಭದಲ್ಲಿ ರೋಗಿಗಳಿಗೆ ಆಪತ್ಬಾಂಧವರೆನಿಸಿದ ಸಮಾಜ ಸೇವಕ, ಆರ್ ಟಿ ಐ ಕಾರ್ಯಕರ್ತ, ಮಾನವ ಹಕ್ಕು ಹೋರಾಟಗಾರ ಹನೀಫ್ ಸಾಹೇಬ್ ಪಾಜಪಳ್ಳರಿಗೆ ಗೌರವ ಪೂರ್ವಕ ಸಮ್ಮಾನ ಕಾರ್ಯಕ್ರಮ ಗಣ್ಯಾತಿ ಗಣ್ಯರ ಸಮ್ಮುಖದಲ್ಲಿ ನಡೆಯಿತು.

Also Read  ಪ್ರಸಿದ್ಧ ಹಾಸ್ಯ ಕಲಾವಿದ ಬಂಟ್ವಾಳ ಜಯರಾಮ ಆಚಾರ್ಯ ನಿಧನ

ಎಂ ಎಸ್ ಮಹಮ್ಮದ್ , ಮಾಣಿ ಜಿ.ಪಂ ಸದಸ್ಯೆ ಮಂಜುಳಾ ಮಾಧವ ಮಾವೆ , ಎಂ ಜೆ ಎಂ ಎಂ ಖತೀಬ ಬಿ ಎ ಸಿದ್ದೀಖ್ ಅರ್ಶದಿ ಮೊದಲಾದ ಗಣ್ಯರು ಅತಿಥಿಗಳು ಈ ಸಮಾರಂಭದಲ್ಲಿ ಉಪಸ್ಥಿತರಿದ್ದರು.

error: Content is protected !!
Scroll to Top