ಪುತ್ತೂರಿನಲ್ಲಿ “ ಪೊಲೀಸರ ಕುಟುಂಬ ಸಮ್ಮಿಲನ ” ಕಾರ್ಯಕ್ರಮ

(ನ್ಯೂಸ್ ಕಡಬ) newskadaba.com ಪುತ್ತೂರು , .28. ಪುತ್ತೂರು ನಗರದ “ ಪೊಲೀಸರ ಕುಟುಂಬ ಸಮ್ಮಿಲನ ” ಕಾರ್ಯಕ್ರಮವು ಬ್ರಹ್ಮಶ್ರೀ ನಾರಾಯಣಗುರು ಸಭಾಂಗಣ, ಪುತ್ತೂರು ಇಲ್ಲಿ ಶನಿವಾರದಂದು ನಡೆದಿದೆ.

ದಕ್ಷಿಣ ಕನ್ನಡ ಜಿಲ್ಲಾ ಪೊಲೀಸರಿಗಾಗಿ ಹಮ್ಮಿಕೊಂಡಿರುವ “ ಜಿಲ್ಲಾ ಪೊಲೀಸರ ಕುಟುಂಬ ಸಮ್ಮಿಲನ “ ಎಂಬ   ಕಾರ್ಯಕ್ರಮದ ಎರಡನೆ ಹಂತವಾಗಿ ಪುತ್ತೂರು ನಗರ ಠಾಣೆ, ಪುತ್ತೂರು ಪೊಲೀಸ್ ಉಪವಿಭಾಗ ಕಛೇರಿ, ಸಂಚಾರ ಪೊಲೀಸ್ ಠಾಣೆ ಮತ್ತು ಮಹಿಳಾ ಪೊಲೀಸ್ ಠಾಣೆ ಪುತ್ತೂರು ಇಲ್ಲಿನ ಅಧಿಕಾರಿಗಳು, ಸಿಬ್ಬಂದಿಗಳು ಮತ್ತು ಅವರ ಕುಟುಂಬ ಸದಸ್ಯರುಗಳಿಗಾಗಿ ದಿನಾಂಕ 26.10.2019 ರಂದು   ಬ್ರಹ್ಮಶ್ರೀ ನಾರಾಯಣಗುರು ಸಭಾಂಗಣ, ಪುತ್ತೂರು ಇಲ್ಲಿ ವಿವಿಧ ಸ್ಪರ್ದೆ ಹಾಗೂ ಮನೋರಂಜನಾ ಕಾರ್ಯಕ್ರಮಗಳನ್ನು ಆಯೋಜಿಸಲಾಯಿತು. ಅಧಿಕಾರಿಗಳು, ಸಿಬ್ಬಂದಿಗಳು ಹಾಗೂ ಅವರ ಕುಟುಂಬ ಸದಸ್ಯರುಗಳು ಉತ್ಸಾಹದಿಂದ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದು , ವಿಜೇತರಾದವರಿಗೆ ಬಹುಮಾನಗಳನ್ನು ನೀಡಿ ಪ್ರೋತ್ಸಾಹಿಸಲಾಯಿತು.  ಸಹಭೋಜನದೊಂದಿಗೆ ಕಾರ್ಯಕ್ರಮ ಯಶಸ್ವಿಯಾಗಿ ಮುಕ್ತಾಯವಾಯಿತು.

Also Read  ಮಡಿಕೇರಿ, ಕೇರಳ ಪ್ರವಾಸ ಹೋಗುವವರಿಗೆ ಮಂಗಳೂರು ಕೆಎಸ್ಸಾರ್ಟಿಸಿಯಿಂದ ಭರ್ಜರಿ ಸಿಹಿಸುದ್ದಿ

error: Content is protected !!
Scroll to Top