ಕದಂಬ ಸಾಮಾಜಿಕ ಹಿತರಕ್ಷಣಾ ಸಂಘಟನೆ ► ಅಸಹಾಯಕ ಕುಟುಂಬಗಳಿಗೆ ಸಹಾಯಹಸ್ತ

(ನ್ಯೂಸ್ ಕಡಬ) newskadaba.com ಕಡಬ, ಆ .19, ಕದಂಬ ಸಾಮಾಜಿಕ ಹಿತರಕ್ಷಣಾ ಸಂಘಟನೆ ಟ್ರಸ್ಟ್‌ ವತಿಯಿಂದ 71ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಸಂಘಟನೆಯ ಆಶಯದಂತೆ ಸಮಾಜದ ಅಸಹಾಯಕ ಕುಟುಂಬಗಳ ಭೇಟಿ, ಸಾಂತ್ವನ, ಸಹಾಯಹಸ್ತ ಚಾಚಲಾಯಿತು.

ನೂಜಿಬಾಳ್ತಿಲ ಬೆಥನಿ ವೃದ್ದಾಶ್ರಮಕ್ಕೆ ಭೇಟಿ ನೀಡಿ ಅಕ್ಕಿ, ಸಾಮಾಗ್ರಿಗಳನ್ನು ವಿತರಿಸಿ ಮಧ್ಯಾಹ್ನದ ಭೋಜನದ ವ್ಯವಸ್ಥೆಯನ್ನು ಏರ್ಪಡಿಸಲಾಯಿತು. ನಂತರ ಅನಾರೋಗ್ಯದಿಂದ ಬಳಲುತ್ತಿರುವ ನಿತ್ಯಾಧರ್ ಕೋಲ್ಡ್‌ ಸ್ಟೋರೇಜ್ ಮಾಲಕ ಪೀಟರ್ ಫರ್ನಾಂಡೀಸ್ ರವರ ಮನೆಗೆ ಹಾಗೂ ಅಪಘಾತದಿಂದ ಗಾಯಗೊಂಡ ಅಸಹಾಯಕರಾದ ಬಾಲಕೃಷ್ಣ ಪಟ್ನರವರ ಮನೆಗೆ ತೆರಳಿ ಅವರ ಆರೋಗ್ಯ ವಿಚಾರಿಸಿ, ಸಾಂತ್ವನವನ್ನು ನೀಡಿ ಅಕ್ಕಿ, ಸಾಮಾಗ್ರಿಗಳನ್ನು ವಿತರಿಸಲಾಯಿತು.

Also Read  'ಜಾನುವಾರು ಸಾಗಾಟ ನಿಷೇಧದ ಆದೇಶ ವಾಪಾಸ್     ➤ ಡಿಸಿ ರವಿಕುಮಾರ್…!!!

ಈ ಸಂದರ್ಭದಲ್ಲಿ ಸಂಘಟನೆಯ ಅಧ್ಯಕ್ಷ ಸೀತಾರಾಮ ಗೌಡ, ಗೌರವಾಧ್ಯಕ್ಷ ಚಂದ್ರಶೇಖರ ಗೌಡ ಕೋಡಿಬೈಲ್, ಗೌರವ ಸಲಹೆಗಾರರಾದ ಜನಾರ್ಧನ ಗೌಡ ಪಣೆಮಜಲು, ಫಾ|ಪಿ.ಕೆ ಅಬ್ರಹಾಂ, ಅಬ್ದುಲ್ ಖಾದರ್, ಅಶೋಕ್ ರೈ ವಜ್ರಪಾಣಿ, ಯೂಸುಫ್ ಮರ್ಧಾಳ, ಕಾರ್ಯದರ್ಶಿಗಳಾದ ಜೋಕಿಂ ಡಿಸೋಜಾ, ರಾಮ್ ಗೋಪಾಲ್ ಕನಸು, ಪ್ರಮುಖರಾದ ಮೇದಪ್ಪ ಗೌಡ, ಪ್ರಶಾಂತ್ ಆಚಾರ್ಯ, ಅನೀಶ್ ಆರಿಗ, ಶಿವರಾಮ್, ನೀಲಾವತಿ ಶಿವರಾಮ್, ಎಲ್ಸಿ ತೋಮಸ್, ವಿವೇಕಾನಂದ ಬೊಳ್ಳಾಜೆ, ಲಾಜಿ, ಯುವರಾಜ್ ಜೈನ್ ಮೊದಲಾದವರು ಉಪಸ್ಥಿತರಿದ್ದರು.

error: Content is protected !!
Scroll to Top