ಕೇರಳದಲ್ಲಿ ಮುಂದಿನ 48 ಗಂಟೆಗಳಲ್ಲಿ ಭಾರೀ ಮಳೆಯಾಗುವ ಮುನ್ಸೂಚನೆ ➤ ಕರಾವಳಿ ತೀರದಿಂದ ದೂರವಾದ ಚಂಡ ಮಾರುತ

 

ನ್ಯೂಸ್ ಕಡಬ ಅ.26. ಕರಾವಳಿ ಭಾಗಕ್ಕೆ ಅಪ್ಪಲಿಸಿದ ಕ್ಯಾರ್ ಚಂಡಮಾರುತ ಪ್ರಭಾವದಿಂದ ಭಾರಿ ಮಳೆಯಿಂದಾಗಿ ಶಾಲಾ ಕಾಲೇಜು ಗಳಿಗೆ ರಜೆಯನ್ನ ಸಾರಲಾಗಿತ್ತು ಇದೀಗ ಕರಾವಳಿ ಭಾಗದಿಂದ ದೂರ ಸರಿದಿದೆ. ದೂರ ಸರಿದರೂ ಹವಾಮಾನ ಇಲಾಖೆ ಮುನ್ಸೂಚನೆಯಂತೆ ಕರಾವಳಿ ತೀರದಲ್ಲಿ ಗಾಳಿ, ಮಳೆಯಾಗುವ ಸಾಧ್ಯತೆ ಇದೆ.

ಇದರಂತೆ ಕರ್ನಾಟಕದ ಬೆಂಗಳೂರು, ಮೈಸೂರು, ಶಿವಮೊಗ್ಗ, ಚಾಮರಾಜ ನಗರಗಳಲ್ಲಿ ಮಳೆಯ ಪ್ರಮಾಣ ಹೆಚ್ಚಾಗಲಿದೆ. ಮುಂದಿನ 48 ಗಂಟೆಗಳಲ್ಲಿ ಕೇರಳದಲ್ಲಿ ಭಾರೀ ಮಳೆಯಾಗುವ ಮುನ್ಸೂಚನೆಯಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

Also Read  ಕೊರೊನಾ ಸೋಂಕನ್ನು ಹಿಮ್ಮೆಟ್ಟಿಸಲು ರಾಜ್ಯ ಸರಕಾರದಿಂದ ಕಟ್ಟುನಿಟ್ಟಿನ ಕ್ರಮ ಜಾರಿ

error: Content is protected !!
Scroll to Top