ಬಾಳಿಲ ( ನ್ಯೂಸ್ ಕಡಬ ): ಮುಹಿಯುದ್ದೀನ್ ಜುಮಾ ಮಸೀದಿ ಅತ್ತಿಕ್ಕರ ಮಜಲು ಅಧೀನದಲ್ಲಿ ಕಾರ್ಯಾಚರಿಸುತ್ತಿರುವ ಮಿನ್ನತುಲ್ ಹುದಾ ಪಂಚವಾರ್ಷಿಕ ಆಚರಣೆ ಪ್ರಯುಕ್ತ ನವಂಬರ್ 18 ಮತ್ತು 19 ರಂದು ಎರಡು ದಿವಸಗಳ ಧಾರ್ಮಿಕ ಮತಪ್ರಭಾಷಣ ನಡೆಯಲಿರುವುದು.

ಮಯ್ಯತ್ ಪರಿಪಾಲನ ವಿಷಯದಲ್ಲಿ ಕ್ಲಿಪ್ಪಿಂಗ್ ಸಹಿತ ಎಲ್ .ಇ .ಡಿ ಸ್ಕ್ರೀನ್ ವ್ಯವಸ್ಥೆಯೊಂದಿಗೆ ಪ್ರಸಿದ್ಧ ವಾಗ್ಮಿ ಉಸ್ತಾದ್ ವಲಿಯುದ್ದೀನ್ ಫೈಝಿ ಎರಡು ದಿವಸಗಳ ಕಾಲ ಪ್ರಭಾಷಣ ನಡೆಸಲಿರುವರು ಎಂದು ಕಾರ್ಯಕ್ರಮದ ಸಂಘಟಕರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.
