ಬಸ್ ಮತ್ತು ಕಾರ್ ನಡುವೆ ಡಿಕ್ಕಿ

(ನ್ಯೂಸ್ ಕಡಬ) newskadaba.com ಸುಳ್ಯ , ಅ.26. ಕಾರು ಹಾಗೂ ಬಸ್ ನಡುವೆ ಡಿಕ್ಕಿ ಸಂಭವಿಸಿದುದರ ಪರಿಣಾಮ ಕಾರಿನಲ್ಲಿರುವವರಿಗೆ ಗಾಯಗೊಂಡ ಘಟನೆ ಸುಳ್ಯ ತಾಲೂಕಿನ ಜಾಲ್ಸೂರು ಗ್ರಾಮದಲ್ಲಿ ಸಂಭವಿಸಿದೆ.

ಕೊಡಗು ಜಿಲ್ಲೆಯ ಚಂದ್ರಪ್ರಸಾದ್ ಜೆ ಎಸ್ ಎಂಬವರು ತನ್ನ ಸ್ನೇಹಿತ ವಿಷ್ಣುಮೂರ್ತಿ ರಾವ್ ರೊಂದಿಗೆ ಕಾರಿನಲ್ಲಿ ಚಲಿಸುತ್ತಿದ್ದಾಗ ಸುಳ್ಯ  ತಾಲೂಕಿನ ಜಾಲ್ಸೂರು  ಎಂಬಲ್ಲಿ ಬಸ್ಸಿನ ಚಾಲಕ ಅಜಾಗರೂಕತೆ ಮತ್ತು ನಿರ್ಲಕ್ಷತನದಿಂದ ಚಲಾಯಿಸಿ ಆಟೋ ರಿಕ್ಷಾವನ್ನು ಓವರ್ ಟೇಕ್ ಮಾಡಿ ಕಾರಿಗೆ ಡಿಕ್ಕಿ ಹೊಡೆದುದರಿಂದ ಕಾರು ಜಖಂಗೊಂಡು ಕಾರಿನಲ್ಲಿದ್ದವರು ಗಾಯಗೊಂಡ ಪರಿಣಾಮ ಅವರನ್ನು ಸುಳ್ಯ ಸರ್ಕಾರಿ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಪಡೆದು, ಬಳಿಕ ಕೆವಿಜಿ ಸುಳ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿರುವುದಾಗಿ ದಾಖಲಾಗಿದೆ.

Also Read  ಗಾಂಜಾ ಸಾಗಾಟ- ಆಟೋ ರಿಕ್ಷಾ ಸಹಿತ ಆರೋಪಿ ಅರೆಸ್ಟ್..!

error: Content is protected !!
Scroll to Top