ಕಾಲು ಜಾರಿ ಹಳ್ಳಕ್ಕೆ ಬಿದ್ದು ಮೃತಪಟ್ಟ ಬಾಲಕ

(ನ್ಯೂಸ್ ಕಡಬ) newskadaba.com ಬೆಳ್ತಂಗಡಿ , .26. ರವಿಯವರ ಹಿರಿಯ ಮಗ ಅಭಿಷೇಕ್ (12 ವರ್ಷ) ತನ್ನ ತಮ್ಮ ದೀಕ್ಷಿತ್ ನ  ಜೊತೆ ನಿನ್ನೆ ಬೆಳಗ್ಗೆ ಮನೆಯಿಂದ ಆಟ ಆಡಲೆಂದು ಹೋಗಿ, ಹಳ್ಳದ ನೀರಿಗೆ ಬಿದ್ದು ಮೃತಪಟ್ಟಿರುವ ಘಟನೆ  ಹೊಸಂಗಡಿ ಗ್ರಾಮ, ಬೆಳ್ತಂಗಡಿ ತಾಲೂಕಿನಲ್ಲಿ ನಡೆದಿದೆ.

ಕೂಲಿಕೆಲಸಗಾರನಾದ ರವಿಯು ಮಗ ಅಭಿಷೇಕ್ ಸಂಜೆಯಾದರೂ ಮನೆಗೆ ಬಾರದದ್ದನ್ನು ಗಮನಿಸಿ, ನೆರೆಯವರ ಸಹಾಯದಿಂದ ಹುಡುಕಾಡಿದಾಗ  ಮನೆಯ ಹತ್ತಿರದ ಪೇರಿಬೊಟ್ಟು ಎಂಬಲ್ಲಿ ಮಳೆ ನೀರು ನಿಂತಿದ್ದ ಹಳ್ಳದ ನೀರಿನ ಬದಿಯಲ್ಲಿ ಅಭಿಷೇಕ್ ನ ಅಂಗಿ ಕಂಡುಬಂದಿದ್ದರಿಂದ ಸಂಶಯಗೊಂಡು ಹಳ್ಳದ ನೀರಿನಲ್ಲಿ  ಹುಡುಕಾಡಿದಾಗ ನೀರಿನ ಆಳದಲ್ಲಿ ಅಭಿಷೇಕ್ ನ ಮೃತದೇಹ ಪತ್ತೆಯಾಗಿತ್ತು. ಹಳ್ಳದ ಬದಿಯ ನೀರಿನಲ್ಲಿ ಆಟ ಆಡುತ್ತಾ ಆಕಸ್ಮಿಕವಾಗಿ ಕಾಲು ಜಾರಿ ಹಳ್ಳದ ನೀರಿಗೆ ಬಿದ್ದುದರ ಪರಿಣಾಮ, ಮೇಲಕ್ಕೆ ಬರಲಾಗದೇ ನೀರಿನ ಆಳದಲ್ಲಿ ಮುಳುಗಿ ಮೃತಪಟ್ಟಿರುವುದೆಂದು ಪ್ರಕರಣ ದಾಖಲಾಗಿದೆ.

Also Read  ಯುವ ಕಾಂಗ್ರೆಸ್ ಅಧ್ಯಕ್ಷ ಮಿಥುನ್ ರೈಗೆ ತಪ್ಪಿದ ಮೂಡುಬಿದಿರೆ ಕ್ಷೇತ್ರದ ಟಿಕೆಟ್ ► ಬೇಸತ್ತ ಯುವ ಕಾಂಗ್ರೆಸ್ ಪದಾಧಿಕಾರಿಗಳಿಂದ ಸಾಮೂಹಿಕ ರಾಜೀನಾಮೆ

error: Content is protected !!
Scroll to Top