ಪ್ರಮುಖ ಹುದ್ದೆಗಳೆಲ್ಲ ಖಾಲಿಯಿದೆ ಕುಕ್ಕೆ ದೇಗುಲದಲ್ಲಿ

(ನ್ಯೂಸ್ ಕಡಬ) newskadaba.com  ಸುಬ್ರಹ್ಮಣ್ಯ, .25. ಪ್ರವಾಸಿಗರ ಮೊದಲ ಆದ್ಯತೆ ದೇಗುಲವಾದ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಪ್ರಮುಖ ಹುದ್ದೆಗಳು ಖಾಲಿ ಇವೆ.

ಪ್ರವಾಸಿಗರಿಗೆ ಸೂಕ್ತ ಸೌಲಭ್ಯಗಳನ್ನು ಒದಗಿಸಲು ಅಧಿಕಾರಿಗಳು ಹಾಗೂ ಸಿಬಂದಿ ವರ್ಗದವರು ಅಗತ್ಯವಾಗಿದ್ದಾರೆ. ಆದಾಯದಲ್ಲಿ   ಮೊದಲ ದೇಗುಲ ಎನಿಸಿರುವ ಸುಬ್ರಹ್ಮಣ್ಯದಲ್ಲಂತೂ ಮುಖ್ಯಕಾರ್ಯ ನಿರ್ವಹಣಾಧಿಕಾರಿ, ಆಡಳಿತಾಧಿ ಕಾರಿ ಇಲ್ಲ; ಆಡಳಿತ ಸಮಿತಿಯೂ ಇಲ್ಲ. ಪ್ರಧಾನ ಅರ್ಚಕ ಹುದ್ದೆಯೂ ಪ್ರಭಾರ ನೆಲೆಯಲ್ಲಿದೆ. ಕೆಲವೆಡೆ 3 ರಿಂದ 5 ದೇಗುಲಗಳಿಗೆ ಒಬ್ಬರೇ ಅಧಿಕಾರಿಯಿದ್ದು, ಎರಡೆರಡು ಕಡೆ ಸಮರ್ಪಕವಾಗಿ ಕೆಲಸ ನಿರ್ವಹಿಸಲಾಗುತ್ತಿಲ್ಲ.

Also Read  ಪುತ್ತೂರು : ‘ಸೀಡ್ಸ್ ಆಫ್ ಹೋಪ್ ಎಂಬ ಸಮಾಜಮುಖಿ ಕಾರ್ಯಕ್ರಮ ಉದ್ಘಾಟನೆ


ದೀಪಾವಳಿ ಸಮೀಪಿಸುತ್ತಿದ್ದಂತೆ, ವಾರ್ಷಿಕ ಜಾತ್ರೆ ಮತ್ತು ಪರ್ವ ದಿನಗಳು ಆರಂಭಗೊಳ್ಳುತ್ತಿದ್ದು, ಭಕ್ತರ ದಂಡು ದೇಗುಲಗಳಿಗೆ ಹರಿದು ಬರಲಾರಂಭಿಸಲಿದ್ದುದರಿಂದ ಅವರಿಗೆ ಮೂಲ ಸೌಕರ್ಯಗಳ ಕೊರತೆಯಿದೆ. ಅದನ್ನು ನಿಭಾಯಿಸಲು ಸಿಬಂದಿ ವರ್ಗದವರು ಬೇಕಾಗಿದ್ದಾರೆ.

error: Content is protected !!
Scroll to Top