ಬೆಳ್ತಂಗಡಿಯಲ್ಲಿ ಕಾರು ಮತ್ತು ಬೈಕ್ ಡಿಕ್ಕಿ ➤ ಬೈಕ್ ಸವಾರನಿಗೆ ಗಾಯ

(ನ್ಯೂಸ್ ಕಡಬ) ಟಿeತಿsಞಚಿಜಚಿbಚಿ.ಛಿom. ಬೆಳ್ತಂಗಡಿ ಅ.25. ಬೈಕ್ ಮತ್ತು ಕಾರ್ ನಡುವೆ ಡಿಕ್ಕಿ ಸಂಭವಿಸಿದ ಪರಿಣಾಮ ಬೈಕ್ ಸವಾರನಿಗೆ ಗಾಯಗೊಂಡ ಘಟನೆ ಬೆಳ್ತಂಗಡಿಯಲ್ಲಿ ಸಂಭವಿಸಿದೆ. ಗಾಯಾಳು ಸವಾರನನ್ನು ಬೆಳ್ತಂಗಡಿ ನಿವಾಸಿ ರಾಘವೇಂದ್ರ (30) ಎಂದು ಗುರುತಿಸಲಾಗಿದೆ.

ರಾಘವೇಂದ್ರ ಅವರು ಮಂಗಳವಾರದಂದು ತನ್ನ ದ್ವಿಚಕ್ರ ವಾಹನದಲ್ಲಿ  ಬೆಳ್ತಂಗಡಿ ತಾಲೂಕು ಕಳೆಂಜ ಗ್ರಾಮದ ಎಣ್ಣೆಗದ್ದೆ ಎಂಬಲ್ಲಿಗೆ ತಲುಪುತ್ತಿದ್ದಂತೆ, ಅರಸಿನಮಕ್ಕಿ ಕಡೆಯಿಂದ ಕಳೆಂಜ ಕಡೆಗೆ ಬರುತ್ತಿದ್ದ ಕಾರು ರಾಘವೇಂದ್ರನವರ ವಾಹನಕ್ಕೆ ಡಿಕ್ಕಿ ಹೊಡೆದ ಪರಿಣಾಮ ಅವರು ಬುಲ್ಲೆಟ್ ಸಮೇತ ರಸ್ತೆಗೆ ಬಿದ್ದು ಬಲಕಾಲಿಗೆ ಮೂಳೆ ಮುರಿತ ಹಾಗೂ ಗಾಯಗೊಂಡು,ಚಿಕಿತ್ಸೆಗಾಗಿಪುತ್ತೂರು ಸಿಟಿ ಆಸ್ಪತ್ರೆಯಲ್ಲಿ ದಾಖಲಾಗಿರುತ್ತಾರೆ. ಈ ಬಗ್ಗೆ ಬೆಳ್ತಂಗಡಿ ಸಂಚಾರ ಠಾಣೆಗೆ ಪ್ರಕರಣ ದಾಖಲಾಗಿರುತ್ತದೆ.

Also Read  ಕರಾವಳಿ: ಮತದಾನ ಕೇಂದ್ರಗಳಲ್ಲಿ ಯಕ್ಷಗಾನ, ಕಂಬಳದ ಸೊಗಸು          

error: Content is protected !!
Scroll to Top