ಒಂದು ಗ್ಲಾಸ್ ಬಿಸಿ ನೀರಿಲ್ಲದೆ 2ಗಂಟೆ ತಡವಾಗಿ ಔಷಧಿ ಸೇವಿಸಿದ ಮಾಜಿ ಪ್ರಧಾನಿ!

(ನ್ಯೂಸ್ ಕಡಬ) newskadaba.com ಬೆಳಗಾವಿ, ಆ .19, ದೇಶದ ಮಾಜಿ ಪ್ರಧಾನಿ ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಎಚ್ ಡಿ ದೇವೇಗೌಡ ಅವರು ಕುಡಿಯಲು ಒಂದು ಗ್ಲಾಸ್ ಬಿಸಿನೀರು ಸಿಗದೆ ಪರದಾಡಿದ ಘಟನೆ ಬೆಳಗಾವಿ ಪ್ರವಾಸಿ ಮಂದಿರದಲ್ಲಿ ನಡೆದಿದೆ.

ಬೆಳಗಾವಿ ಜಿಲ್ಲೆಯಲ್ಲಿ ಪಕ್ಷ ಸಂಘಟನೆಗಾಗಿ ಎರಡು ದಿನಗಳ ಕಾಲ ಪ್ರವಾಸ ಹಮ್ಮಿಕೊಂಡಿರುವ ಮಾಜಿ ಪ್ರಧಾನಿ ಔಷಧಿ ತಗೆದುಕೊಳ್ಳಲು ಪ್ರವಾಸಿ ಮಂದಿರದ ಸಿಬ್ಬಂದಿಯಲ್ಲಿ ಬಿಸಿನೀರು ಕೇಳಿದರೆ ಅವರು ನೀರು ಕೊಡಲು ನಿರಾಕರಿಸಿದರು. ಸುಮಾರು 2 ಗಂಟೆಗಳ ಕಾಲ ಮಾಜಿ ಪ್ರಧಾನಿ ಬಿಸಿ ನೀರಿಗಾಗಿ ಕಾದು ಕುಳಿತಿದ್ದರು.

Also Read  ಪ್ರವಾಸಿ ಸ್ವಯಂ ಉದ್ಯೋಗ ಯೋಜನೆಗೆ (ಕೇರಳ ಮಾದರಿ) ಅರ್ಜಿ ಆಹ್ವಾನ

ಕೊನೆಗೆ ಕಾರ್ಯಕರ್ತರೊಬ್ಬರ ಮನೆಯಿಂದ ಬಿಸಿನೀರು ತಂದು ಎಚ್ ಡಿ ದೇವೇಗೌಡ ಅವರು ಔಷಧಿ ಸೇವಿಸಿದ್ರು. ಘಟನೆಯಿಂದ ಸ್ಥಳದಲ್ಲಿದ್ದ ಎಂ ಎಲ್ ಸಿ ಶರವಣ ಗರಂ ಆಗಿ ಪ್ರವಾಸಿ ಮಂದಿರದ ಸಿಬ್ಬಂದಿಯನ್ನು ತರಾಟೆಗೆ ತಗೆದುಕೊಂಡಿದ್ದಾರೆ. ಐಬಿ ಕ್ಯಾಂಟೀನ್ ಮುಚ್ಚಿ 1 ತಿಂಗಳು ಆಗಿತ್ತು. ಹೀಗಾಗಿ ನೀರಿನ ವ್ಯವಸ್ಥೆಗಾಗಿ ಮಾಜಿ ಪ್ರಧಾನಿ ಪರದಾಡುವ ಸ್ಥಿತಿ ಬಂದಿತ್ತು.

error: Content is protected !!
Scroll to Top