ಸುಳ್ಯ: ವ್ಯಕ್ತಿ ನಾಪತ್ತೆ

(ನ್ಯೂಸ್ ಕಡಬ) newskadaba.com ಸುಳ್ಯ, ಅ.23. ಸುಳ್ಯಕ್ಕೆಂದು ಹೋದ ವ್ಯಕ್ತಿ ವಾಪಾಸ್ ಮನೆಗೆ ಬಾರದೆ ನಾಪತ್ತೆಯಾದ ಘಟನೆ ಸುಳ್ಯದಿಂದ ವರದಿಯಾಗಿದೆ.

ನಾಪತ್ತೆಯಾದವರನ್ನು ಸುಳ್ಯ ತಾಲೂಕಿನ ಉಬರಡ್ಕ ಮಿತ್ತೂರು ಗ್ರಾಮದ ಕುತ್ತಮೊಟ್ಟೆ ನಿವಾಸಿ ನಾರಾಯಣ ಪಾಟಾಳಿ (59) ಎಂದು ಗುರುತಿಸಲಾಗಿದೆ. ಮಾಜಿ ಸೈನಿಕರಾಗಿದ್ದ  ಇವರು, ಪ್ರತಿದಿನ ಮನೆಯಿಂದ ಸುಳ್ಯ ಪೇಟೆಗೆ ಹೋಗುತ್ತಿದ್ದು ದಿನಾಂಕ 19 –10 – 2019ರಂದು ಬೆಳಿಗ್ಗೆ 9 ಗಂಟೆಗೆ ಮನೆಯಿಂದ ಸುಳ್ಯಕ್ಕೆಂದು ಹೋದವರು ವಾಪಾಸು ಮನೆಗೆ ಬಾರದೇ ಇದ್ದುದರಿಂದ ಇವರ ಪತ್ನಿ ಪರಿಚಯಸ್ಥರಲ್ಲಿ ಹಾಗೂ ಸಂಬಂಧಿಕರಲ್ಲಿ ವಿಚಾರಿಸಿ ಹುಡುಕಾಡಿದರೂ ಈವರೆಗೆ ಪತ್ತೆಯಾಗಿರುವುದಿಲ್ಲ. ಈ ಬಗ್ಗೆ ಸುಳ್ಯ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Also Read  ಮಂಗಳೂರು: ಪೆಟ್ರೋಲ್ ಬಂಕ್ ನಲ್ಲಿ ಸ್ಕ್ಯಾನಿಂಗ್ ಗೆ ತನ್ನದೇ QR ಕೋಡ್ ಇಟ್ಟ ಸಿಬ್ಬಂದಿ- 58 ಲಕ್ಷ ವಂಚನೆ

 

 

error: Content is protected !!
Scroll to Top