ಲಾರಿ, ಕ್ರೂಸರ್ ಮುಖಾಮುಖಿ ಡಿಕ್ಕಿ ►► ಒಂದೇ ಕುಟುಂಬದ 12 ಮಂದಿಗೆ ಗಾಯ

(ನ್ಯೂಸ್ ಕಡಬ) newskadaba.com ದಾವಣಗೆರೆ, ಆ .19, ಲಾರಿ ಮತ್ತು ಕ್ರೂಸರ್ ನಡುವೆ ಮುಖಾಮುಖಿ ಡಿಕ್ಕಿಯಾದ ಪರಿಣಾಮ ಒಂದೇ ಕುಟುಂಬದ 12 ಮಂದಿಗೆ ಗಾಯಗಳಾದ ಘಟನೆ ಶನಿವಾರ ನಡೆದಿದೆ.

ಶನಿವಾರ ಮುಂಜಾನೆ ಜಗಳೂರು ತಾಲೂಕಿನ ದೇವಿಕೆರೆ ಬಳಿ ಅವಘಡ ಸಂಭವಿಸಿದೆಇಬ್ಬರು ಚಿಕ್ಕಮಕ್ಕಳು ಸೇರಿದಂತೆ ಆರು ಜನರಿಗೆ ಗಂಭೀರವಾಗಿ ಗಾಯಗಳಾಗಿದ್ದುಗಾಯಾಳುಗಳನ್ನು ದಾವಣಗೆರೆ ನಿಟ್ಟುವಳ್ಳಿಯ ಶ್ರಿನಿವಾಸ್, ಪರಶುರಾಮ, ದೀಪಿಕಾ, ಮಹಾಲಕ್ಷ್ಮಿ, ರೇಣುಕಮ್ಮ, ಸಿಂಚನಾ, ಇಂಚರಾ, ರವಿಕುಮಾರ್, ನೇತ್ರಾವತಿ, ಶಶಿಕಲಾ, ಮಣಿ, ಜಯಲಕ್ಷ್ಮಿ ಎಂದು ಗುರುತಿಸಲಾಗಿದೆ.

Also Read  ಮಂಗಳೂರು: ಯುವ ಉದ್ಯಮಿ ಕುಸುಮಾಧರ ಸೇರಿದಂತೆ 25 ಮಂದಿಗೆ ‘ಬಿಜಿಎಸ್ ಕರಾವಳಿ ರತ್ನ’ ಪ್ರಶಸ್ತಿ ಪ್ರದಾನ

ಪಾವಗಡ ದೇವಸ್ಥಾನಕ್ಕೆ ತೆರಳುವ ಮಾರ್ಗದಲ್ಲಿ ದೇವಿಕೆರೆ ಸಮೀಪ ಎದುರಿಗೆ ಬಂದ ಲಾರಿ ಡಿಕ್ಕಿ ಹೊಡೆದಿದೆ. ಪರಿಣಾಮ ಕ್ರೂಸರ್ ಮುಂಭಾಗದಲ್ಲಿ ಕುಳಿತವರಿಗೆ ಗಂಭೀರ ಗಾಯಗಳಾಗಿವೆ. ಸದ್ಯ ಎಲ್ಲಾ ಗಾಯಾಳುಗಳನ್ನು ದಾವಣಗೆರೆ ಬಾಪೂಜೆ, ಚಿಗಟೇರಿ ಆಸ್ಪತ್ರೆಗೆ ದಾಖಲಿಸಲಾಗಿದೆ ಸಂಬಂಧ ಜಗಳೂರು ಪೊಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

error: Content is protected !!
Scroll to Top